ಮೈಸೂರು: ಶಿಕ್ಷಣದ ಉದ್ದೇಶದ ಜಾಗತಿಕ ಸಬಲೀಕರಣವೇ ಹೊರತು ಕೋಟ್ಯಾದಿಪತಿಗಳನ್ನು ಸೃಷ್ಟಿಸುವುದಲ್ಲ. ಇದು ಶಿಕ್ಷಣ ಕ್ಷೇತ್ರದ ಬಹುದೊಡ್ಡ ಕುಸಿತ ಎಂದು ಆಂಧಪ್ರದೇಶದ ಗುಂಟೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಸಿ.ನಾಗಭೂಷಣ್ ಕಳವಳ ವ್ಯಕ್ತಪಡಿಸಿದರು.
ಕ್ರಾಫರ್ಡ್ ಭವನದಲ್ಲಿ ಆಯೋಜಿಸಿದ್ದ ಮೈಸೂರು ವಿಶ್ವವಿದ್ಯಾನಿಲಯದ ಸಂಸ್ಥಾಪನ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬಹುತೇಕ ಪೋಷಕರು ಮತ್ತು ವಿದ್ಯಾರ್ಥಿಗಳ ತಲೆಯಲ್ಲಿರುವುದು ಶಿಕ್ಷಣ ಪಡೆಯವುದು ಕೋಟಿಗಟ್ಟಲೆ ಸಂಪಾದನೆ ಮಾಡಬೇಕು ಎಂದೇ ಹೊರತು ಯಾರೊಬ್ಬರಿಗೂ ಸಮಾಜದ ಸಬಲೀಕರಣವಾಗಬೇಕು ಎಂಬ ಕಾಳಜಿಯೇ ಇಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಇಂದು ವಿಶ್ವವಿದ್ಯಾನಿಯಗಳೂ ಸಿಮೀತ ಅವಧಿಯಲ್ಲಿ ಸಾಧವಾದಷ್ಟು ಬೇಗ ಪಠ್ಯಕ್ರಮ ಬೋಧಿಸಿ, ಪರೀಕ್ಷೆ ಮುಗಿಸುವುದೇ ತಮ್ಮ ಬಹುದೊಡ್ಡ ಜವಾಬ್ದಾರಿ ಎಂದು ತಿಳಿದಿವೆ. ಅದಕ್ಕಾಗಿಯೇ ಪರೀಕ್ಷಾಂಗ ವಿಭಾಗವನ್ನೂ ತೆರಯಲಾಗಿದೆ. ಇದು ಮುಗಿದು ಬಿಟ್ಟರೆ ನಮ್ಮ ಪಾಲಿನ ಕೆಲಸ ಮುಗಿಯಿತು ಎಂಬ ನಿರ್ಧಾರಕ್ಕೆ ಪ್ರಾಧ್ಯಾಪಕರು ತಲುಪಿದ್ದಾರೆ. ಪರೀಕ್ಷೆ ಎಂಬುದು ಶಾಲಾ ಕಾಲೇಜುಗಳಿಗೆ ಅಂಟಿರುವ ಕೊಳಕು ಸಂಸ್ಕೃತಿ. ಪರೀಕ್ಷೆಗಳು ಪಠ್ಯಪುಸ್ತಕದ ಉಪ ಉತ್ಪನ್ನ ಮಾತ್ರ ಆಗಬೇಕು. ವಿದ್ಯಾರ್ಥಿಗಳಲ್ಲಿ ತಾರ್ತಿಕ ಚಿಂತನೆ ಬೆಳೆಸಲು ಹೆಚ್ಚು ಪ್ರಾತಿನಿಧ ನೀಡಿದರೆ ಪರೀಕ್ಷೆ ತಾನಾಗಿಯೇ ನಡೆಯತ್ತದೆ, ಅದಕ್ಕಾಗಿಯೇ ಒಂದು ಪ್ರತ್ಯೇಕ ವಿಭಾಗ ತೆರೆಯುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಭಾರತ ರತ್ನ ಸಿ.ಎನ್.ಆರ್.ರಾವ್ ಹೇಳಿದಂತೆ ಶಿಕ್ಷಣದ ಉದ್ದೇಶ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವನೆ ಬೆಳಸುವಂತಾಗಬೇಕೇ ವಿನಃ ಕೇವಲ ಒಂದು ಉದ್ಯೋಗಕ್ಕೆ ಸಿಮೀತಗೊಳಿಸುವಂತೆ ಮಾಡಬಾರದು ಎಂದು ಹೇಳಿದ್ದಾರೆ. ಅದ್ದರಿಂದ ಶಿಕ್ಷಕರು ತಮ್ಮ ವಿದ್ಯಾರ್ಥಿಗಳನ್ನು ಕೇವಲ ಪರೀಕ್ಷೆಗೆ ಸಜ್ಜುಗೊಳಿಸುವುದಕ್ಕೆ ಸೀಮಿತಗೊಳ್ಳದೆ ವಿಷಯದ ಬಗ್ಗೆ ವಿಶ್ಲೇಷಣಾತ್ಮಕ ಆಲೋಚನೆ ಮೂಡುವಂತೆ ತಯಾರು ಮಾಡಬೇಕು ಎಂದು ಸಲಹೆ ನಿಡಿದರು.
ಮೈಸೂರು ವಿಶ್ವವಿದ್ಯಾನಿಲಯದ ಕಂಪ್ಯೂಟರ್ ವಿಜ್ಞಾನ ವಿಭಾಗ ದೇಶದ ಪ್ರಮುಖ ವಿಶ್ವವಿದ್ಯಾನಿಲಯಗಳ ಪೈಕಿ ಒಂದಾಗಿದೆ. ಕುವೆಂಪು, ಪ್ರೊ.ಎಸ್.ಎನ್.ಹೆಗ್ಡೆ ಸೇರಿದಂತೆ ಇಲ್ಲಿ ಕುಲಪತಿಗಳಾಗಿ ಸೇವೆ ಸಲ್ಲಿಸಿರುವ ಪ್ರತಿಯೊಬ್ಬರೂ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದಾರೆ. ಇವರು ನೀಡಿದ ಮಾರ್ಗದರ್ಶನದಲ್ಲಿ ವಿಶ್ವವಿದ್ಯಾನಿಲಯ ನಡೆಯಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಕುಲಸಚಿವೆ ವಿ.ಆರ್.ಶೈಲಜಾ, ಹಣಕಾಸು ಅಧಿಕಾರಿ ಸಂಗೀತ ಗಜಾನನಭಟ್, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಎಂ ಮಹದೇವನ್, ವಿಶ್ವವಿದ್ಯಾನಿಯದ ಪ್ರಾಧ್ಯಾಪಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.