Friday, April 18, 2025
Google search engine

HomeUncategorizedರಾಷ್ಟ್ರೀಯಜಾಗತಿಕ ಹೂಡಿಕೆದಾರರ ಸಮಾವೇಶ: ಸಚಿವೆ ನಿರ್ಮಲಾ, ಪಿಯೂಷ್ ಗೆ ಆಹ್ವಾನ

ಜಾಗತಿಕ ಹೂಡಿಕೆದಾರರ ಸಮಾವೇಶ: ಸಚಿವೆ ನಿರ್ಮಲಾ, ಪಿಯೂಷ್ ಗೆ ಆಹ್ವಾನ

ನವದೆಹಲಿ: ಇದೇ ತಿಂಗಳ 11ರಿಂದ 14ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಬುಧವಾರ ಖುದ್ದಾಗಿ ಆಹ್ವಾನಿಸಲಾಯಿತು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರೊಂದಿಗೆ ಸಚಿವೆಯನ್ನು ಭೇಟಿಯಾದ ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌ ಬಿ ಪಾಟೀಲ ಆಮಂತ್ರಣ ನೀಡಿದ್ದಾರೆ.

ಈ ಸಂದರ್ಭದಲ್ಲಿ ಅವರು, ಹೂಡಿಕೆದಾರರ ಸಮಾವೇಶದ ವೈಶಿಷ್ಟ್ಯಗಳನ್ನು ಮತ್ತು ರಾಜ್ಯ ಸರಕಾರದ ನೂತನ‌ ಕೈಗಾರಿಕಾ ನೀತಿ ಹಾಗೂ ಸ್ವಚ್ಛ ಇಂಧನ‌ ನೀತಿಯ ಬಗ್ಗೆ ನಿರ್ಮಲಾ ಅವರಿಗೆ ಮಾಹಿತಿ ನೀಡಿದರು.

ಬಳಿಕ ಪಾಟೀಲ ಅವರು ಕೇಂದ್ರ ವಾಣಿಜ್ಯ ಸಚಿವ ಪೀಯೂಷ್ ಗೋಯಲ್ ಮತ್ತು ಎಐಸಿಸಿ ಕರ್ನಾಟಕ ಉಸ್ತುವಾರಿ, ಸಂಸದ ಕೆ ಸಿ ವೇಣುಗೋಪಾಲ್ ಅವರನ್ನು ಭೇಟಿಯಾಗಿ, ಆಹ್ವಾನ ಪತ್ರಿಕೆ ನೀಡಿದರು.

RELATED ARTICLES
- Advertisment -
Google search engine

Most Popular