Sunday, September 7, 2025
Google search engine

Homeಅಪರಾಧಬೆಳಗಾವಿಯಲ್ಲಿ ಹೈಫೈ ಕಾರ್ ನಲ್ಲಿ ಗೋವಾದ ಮದ್ಯ ಸಾಗಾಟ: 50 ಬಾಕ್ಸ್ ಸೀಜ್

ಬೆಳಗಾವಿಯಲ್ಲಿ ಹೈಫೈ ಕಾರ್ ನಲ್ಲಿ ಗೋವಾದ ಮದ್ಯ ಸಾಗಾಟ: 50 ಬಾಕ್ಸ್ ಸೀಜ್

  • ವರದಿ: ಸ್ಟೀಫನ್ ಜೇಮ್ಸ್ ಬೆಳಗಾವಿ

ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಶ್ರೀ ಗಣೇಶನ ವಿಸರ್ಜನೆಗೆ ಅದ್ಧೂರಿಯಾಗಿ ತಯಾರಿ ಮಾಡಲಾಗಿದ್ದು, ಪೊಲೀಸರು ಸಕಲ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇಂದು ಅಹಿತಕರ ಘಟನೆ ನಡೆಯದಂತೆ ತಡೆಯಲು ಮದ್ಯ ಮಾರಾಟ ಬಂದ್ ಮಾಡಲಾಗಿದೆ. ಆದರೆ ಅಕ್ರಮವಾಗಿ ಗೋವಾ ರಾಜ್ಯದ ಮದ್ಯ ಸಾಗಿಸಲು ಯತ್ನಿಸಿ ಗ್ಯಾಂಗ್ ವಿಫಲವಾಗಿದೆ.

ಬೆಳಗಾವಿಗೆ ಗಡಿಗೆ ಹೊಂದಿಕೊಂಡಿರುವ ಗೋವಾ ರಾಜ್ಯದಿಂದ ಪದೆ ಪದೆ ಅಕ್ರಮ ಮದ್ಯ ಸಾಗಾಟ ನಡೆಸುವ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಇಂದು ಕೂಡ ಅಬಕಾರಿ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಲಕ್ಷಾಂತರ ಮೌಲದ್ಯ ಮದ್ಯ ಸಿಜ್ ಮಾಡಿದ್ದಾರೆ.

ಬೆಳಗಾವಿ ಗಡಿಯಲ್ಲಿರುವ ರಾಕಸಕೊಪ್ಪ ಡ್ಯಾಂ ಬಳಿ ಅವಕಾರಿ ಪೊಲೀಸರು ಖಾಸಗಿ ವಾಹನ ತಗೋಂಡು ನಿಂತಿದ್ರು, ಕಾರ್ ನಲ್ಲಿ ಮದ್ಯ ಸಾಗಿಸುತ್ತಿದನ್ನು ನೋಡಿ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಬಾಳು ಸಾತೆರಿ ಎಂಬ ಆರೋಪಿ ಕಾರ್ ಬಿಟ್ಟು ಪರಾರಿಯಾಗಿದ್ದಾನೆ‌

ಕಾರ್‌ ನಲ್ಲಿ ಒಟ್ಟು 10 ಪ್ರಕಾರ ಬ್ಯಾಂಡ್ ನ ಗಳು 50 ಬಾಕ್ಸ್ ಗಳು ಇದ್ದು, ಕರ್ನಾಟಕದ ಮದ್ಯದ ಬೆಲೆಯ ಪ್ರಕಾರ 5 ಲಕ್ಷ 63 ಸಾವಿರ ಆಗುತ್ತೆ. 3 ಲಕ್ಷ ಮೌಲ್ಯದ ಕಾರ್ ಹಾಗೂ 30 ಸಾವಿರ ಮೌಲ್ಯದ ಬೈಕ್ ಸೀಜ್ ಮಾಡಲಾಗಿದೆ. ಹೀಗೆ ಒಟ್ಟು 8 ಲಕ್ಷ 86 ಸಾವಿರ ಮೌಲ್ಯದ ವಸ್ತುಗಳು ವಶಕ್ಕೆ ಪಡೆಯಲಾಗಿದೆ‌‌. ಎಂದು ಅಬಕಾರಿ ಉಪ ಅಧಿಕ್ಷರಾದ ರವಿ ಮುರಗೋಡ ತಿಳಿಸಿದರು.

RELATED ARTICLES
- Advertisment -
Google search engine

Most Popular