Sunday, December 14, 2025
Google search engine

Homeಅಪರಾಧಕಾನೂನುಗೋಕಾಕ: ಲೋಕಅದಾಲತ್; 2,112 ಪ್ರಕರಣಗಳು ಇತ್ಯರ್ಥ.

ಗೋಕಾಕ: ಲೋಕಅದಾಲತ್; 2,112 ಪ್ರಕರಣಗಳು ಇತ್ಯರ್ಥ.

ವರದಿ :ಸ್ಟೀಫನ್ ಜೇಮ್ಸ್.

ಗೋಕಾಕ: ಇಲ್ಲಿನ ತಾಲ್ಲೂಕು ಕಾನೂನು ಸೇವೆಗಳ ಸಮಿತಿ ನ್ಯಾಯಾಲಯಗಳ ಸಂಕೀರ್ಣದಲ್ಲಿ ಶನಿವಾರ ನಡೆದ ಬೃಹತ್‌ ಲೋಕ ಅದಾಲತ್‌ನಲ್ಲಿ 2,112 ಪ್ರಕರಣಗಳು ಇತ್ಯರ್ಥಗೊಂಡು, ಕಕ್ಷಿಗಾರರಿಗೆ ₹2,85,60,903 ಪರಿಹಾರಕ್ಕೆ ಆದೇಶಿಸಲಾಯಿತು.

ಇವುಗಳಲ್ಲಿ 12ನೇ ಹೆಚ್ಚುವರಿ ಜಿಲ್ಲಾ ನ್ಯಾಯಲಯ ವ್ಯಾಪ್ತಿಯ 10, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದ 26, ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯದ 30 ಹಾಗೂ ಪ್ರಧಾನ ಜೆ.ಎಂ.ಎಫ್.ಸಿ. ನ್ಯಾಯಾಲಯದ 471, 1ನೇ ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಲಯದ 963 ಮತ್ತು 2ನೇ ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಲಯದ 612 ಪ್ರಕರಣಗಳು ಇತ್ಯರ್ಥಿಗೊಂಡಿವೆ. ಇವುಗಳಲ್ಲಿ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣಾ ಹಂತದಲ್ಲಿದ್ದ ಪ್ರಕರಣಗಳಲ್ಲದೇ, ಬ್ಯಾಂಕ್, ಇತರೆ ಹಣಕಾಸು ಸಂಸ್ಥೆಗಳು, ಚೆಕ್ ಬೌನ್ಸ್ ಪ್ರಕರಣಗಳು, ಜನನ-ಮರಣಗಳ ನೋಂದಣಿ, ವೈವಾಹಿಕ ಜೀವನಕ್ಕೆ ಸಂಬಂಧಿಸಿದ, ವಿವಾಹ ವಿಚ್ಛೇದನ, ಸ್ಥಿರಾಸ್ಥಿಗಳಲ್ಲಿ ಪಾಲು-ಪಟ್ಟಿ ಹೀಗೆ ಇನ್ನೂ ಅನೇಕ ನಮೂನೆಯ ಬೇಡಿಕೆಗಳನ್ನು ಇಟ್ಟುಕೊಂಡು ನ್ಯಾಯಾಲಯಗಳ ಕದ ತಟ್ಟುತ್ತಿದ್ದ ಕಕ್ಷಿಗಾರರು ಪರಸ್ಪರ ಸಹೋದರತ್ವ ಭಾವದೊಂದಿಗೆ ಇನ್ನು ನಿರಂಬಳದಿಂದ ವಿಶ್ರಮಿಸುವ ಸ್ಥಿತಿ ಮೂಡಿದೆ. ವಕೀಲರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ನೀಡಿದ ಸಹಕಾರ ಹಾಗೂ ನ್ಯಾಯಾಧೀಶರ ವೃಂದವೂ ತೋರಿದ ಚಕ್ಯತೆಯಿಂದಾಗಿ ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಸಹಸ್ರ ಸಂಖ್ಯೆಯಲ್ಲಿ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲು ಸಾಧ್ಯವಾಯಿತು ಎಂದು ತಾಲ್ಲೂಕು ಕಾನೂನು ಸಮಿತಿ ಅಧ್ಯಕ್ಷರೂ ಆಗಿರುವ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಉಮೇಶ ಆತ್ನುರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular