ಚಾಮರಾಜನಗರ: ಸಮಗ್ರ ಕರ್ನಾಟಕದ ಏಕತೆಯ ಮೂಲಕ ಕನ್ನಡಿಗರ ಒಂದಾಗಲು ಶ್ರಮಿಸಿದ ಮಹಾನ್ ವ್ಯಕ್ತಿಗಳಿಗೆ ಗೌರವ ಸಲ್ಲಿಸಬೇಕು ಎಂದು ಮಾಜಿ ನಗರಸಭಾ ಸದಸ್ಯೆ, ಕನ್ನಡ ಸಾಹಿತ್ಯ ಪರಿಷತ್ತಿನ ಪದ್ಮಪುರುಷೋತ್ತಮ್ ತಿಳಿಸಿದರು. ಅವರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನಡೆದ ಸುವರ್ಣಸಂಭ್ರಮ, ಕನ್ನಡ ಕರ್ನಾಟಕ ಏಕೀಕರಣ ನೆನಪು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಹರಿದು ಹಂಚಿ ಹೋಗಿದ್ದ ಕನ್ನಡ ಪ್ರದೇಶಗಳು ಹಾಗೂ ಕನ್ನಡಿಗರನ್ನು ಒಂದಗೂಡಿಸಿತು. ಮೈಸೂರು ರಾಜ್ಯವನ್ನು ಕರ್ನಾಟಕವಾಗಿ ರೂಪಿಸಿ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ಎಲ್ಲ ಮಹನೀಯರನ್ನು ಗೌರವಿಸೋಣ . ಏಕೀಕರಣಕ್ಕೆ ಶ್ರಮಿಸಿದ ಎಲ್ಲರನ್ನು ಗೌರವಿಸಿ ನೆನಪಿಸಿಕೊಳ್ಳುವುದು ನಮ್ಮ ಸಂಸ್ಕೃತಿಯ ಗೌರವ ಎಂದರು.
ಪತ್ರಿಕಾ ಪ್ರತಿನಿಧಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯ ಶಿವಲಿಂಗ ಮೂರ್ತಿ ಮಾತನಾಡಿ ಕರ್ನಾಟಕ ಏಕೀಕರಣದ ಉದ್ದೇಶ ಪೂರ್ಣವಾಗಿ ಬಗೆಹರಿದಿಲ್ಲ. ಕನ್ನಡಿಗರ ಸಮಗ್ರ ಅಭಿವೃದ್ಧಿಗೆ ಹಾಗೂ ಗಡಿ ಪ್ರದೇಶಗಳ ಅಭಿವೃದ್ಧಿಗೆ ವಿಶೇಷವಾದ ಯೋಜನೆಗಳನ್ನು ರೂಪಿಸಿ ಅಭಿವೃದ್ಧಿಪಡಿಸಬೇಕು. ಕನ್ನಡ ಪ್ರದೇಶಗಳನ್ನು ಒಂದುಗೂಡಿಸಿದ ಹಾಗೂ ಅನೇಕ ಪ್ರದೇಶಗಳು ಇನ್ನೂ ಹೊರರಾಜ್ಯಗಳಿಗೆ ಸೇರಿವೆ ಎಂದು ,ಅಲ್ಲಿ ಗಡಿ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ರೂಪಿಸಬೇಕೆಂದರು.
ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ವಹಿಸಿ ಕರ್ನಾಟಕ ಏಕೀಕರಣ ವಾಗಲು ಕನ್ನಡ ಪತ್ರಿಕೆಗಳು ವಿಶೇಷವಾಗಿ ಪ್ರಯತ್ನಿಸಿದವು. ಕನ್ನಡ ಪತ್ರಿಕೆಗಳ ಪ್ರಭಾವದಿಂದ ಕನ್ನಡಿಗರ ಜಾಗೃತಿ ಹೆಚ್ಚಾಯಿತು.ಸಿದ್ದಪ್ಪ ಕಂಬಳಿ ದೇಶಪಾಂಡೆ ,ರಾಮಸ್ವಾಮಿ ಅಯ್ಯಂಗಾರ್, ಕೆಂಗಲ್ ಹನುಮಂತಯ್ಯ, ನಿಜಲಿಂಗಪ್ಪ ಶ್ರೀನಿವಾಸರಾವ್, ಗುದ್ಲೆಪ್ಪ ಹಳ್ಳಿಕೇರಿ ಮುಂತಾದ ಮಹಾನಾಯಕರ ಪ್ರಯತ್ನವನ್ನು ನಾವೆಲ್ಲರೂ ಸ್ಮರಿಸಬೇಕು. ಕರ್ನಾಟಕ ವಿದ್ಯಾವರ್ಧಕ ಸಂಘ, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಸಂಘ ಸಂಸ್ಥೆಗಳ ಹೋರಾಟವನ್ನು ನಾವು ಮರೆಯಲು ಸಾಧ್ಯವಿಲ್ಲ . ಹುಯಿಲಗೋಳ ನಾರಾಯಣರಾಯರು ,ಶಾಂತ ಕವಿ ಕುವೆಂಪು, ಬಿ ಎಂ ಶ್ರೀರವರ ಅನೇಕ ಗೀತೆಗಳು ತುಂಬಾ ಪ್ರಭಾವಶಾಲಿಯಾದವು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ, ಕರ್ನಾಟಕ ಸಭಾ , ಕರ್ನಾಟಕ ಏಕೀಕರಣ ಸಮಿತಿ ಪ್ರಭಾವಶಾಲಿಯಾಗಿ ಕಾರ್ಯನಿರ್ವಹಿಸಿತು . ಕನ್ನಡಿಗರು ಎಂದಿಗೂ ಹೆಮ್ಮೆ ಪಡಬೇಕಾದ ವಿಷಯವೆಂದು ತಿಳಿಸಿದರು.
ಕರ್ನಾಟಕ ಏಕೀಕರಣ ಕುರಿತು ಪ್ರಾಸ್ತಾವಿಕವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯ ರವಿಚಂದ್ರನ್ ಪ್ರಸಾದ್ ಮಾತನಾಡಿ ನಂಬರ್ ಒಂದು ೧೯೫೬ರಂದು ಏಕೆ ಕೃತ ನವ ಮೈಸೂರು ರಾಜ್ಯ ರಚನೆಯಾಗಿ ತದನಂತರ ೧೯೭೩ ನವೆಂಬರ್ ೧ ಕರ್ನಾಟಕ ಎಂದು ಮರುನಾಮಕರಣಗೊಂಡು ಸುವರ್ಣ ಸಂಭ್ರಮದಲ್ಲಿ ನಾವು ಇದ್ದೇವೆ ಎಂದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಬಿಕೆ ಆರಾಧ್ಯ ,ಸರಸ್ವತಿ, ಸುರೇಶ್ ಗೌಡ , ಗೋವಿಂದರಾಜು, ಬೊಮ್ಮಾಯಿ, ಲಕ್ಷ್ಮಿ ನರಸಿಂಹ, ಇದ್ದರು.
