ಚಾಮರಾಜನಗರ: ಅಖಿಲ ಕರ್ನಾಟಕ ಗಾಣಿಗರ ಸಂಘದ ಸುವರ್ಣ ಮಹೋತ್ವವ ಹಾಗೂ ನೂತನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಅಭಿನಂದನಾ ಕಾರ್ಯಕ್ರಮ, ಗಾಣಿಗರ ಸಮಾವೇಶವನ್ನು ಬೆಂಗಳೂರಿನಲ್ಲಿ ಡಿ.೨ರಂದು ಆಯೋಜನೆ ಮಾಡಿದ್ದು, ಸಮಾಜದ ಬಂಧಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ರಾಜ್ಯ ಗಾಣಿಗರ ಸಂಘದ ಅಧ್ಯಕ್ಷ ಎಂ.ಆರ್. ರಾಜಶೇಖರ್ ಮನವಿ ಮಾಡಿದರು.
ನಗರದಲ್ಲಿ ನಡೆದ ಜ್ಯೋರ್ತಿಪಣ ಗಾಣಿಗರ ಸಂಘದ ಜಿಲ್ಲೆಯ ಪದಾಧಿಕಾರಿಗಳು ಹಾಗೂ ಸಮಾಜದ ಬಂಧುಗಳ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿ ರಾಜ್ಯ ಮಟ್ಟದಲ್ಲಿ ಗಾಣಿಗರ ಸಂಘ ಸ್ಥಾಪನೆಗೊಂಡು ೫೦ ವರ್ಷಗಳು ಪೊರೈಸಿದ ಸವಿನೆನಪಿಗಾಗಿ ಸುವರ್ಣ ಮಹೋತ್ಸವ ಹಾಗೂ ನೂತನ ಕಟ್ಟದ ಬ್ಲಾಕ್ ೧ ಉದ್ಗಾಟನೆ ಮತ್ತು ಬ್ಲಾಕ್ ೨ ಕಟ್ಟದ ಶಂಕುಸ್ಥಾಪನೆ ಸಮಾರಂಭವು ಬೆಂಗಳೂರು ದಕ್ಷಿಣ ತಾಲೂಕು ಅಂಜನಾಪುರ ವಾರ್ಡ್ ನಂ. ೧೯೬ ಅವಲಹಳ್ಳಿ ನಂ-೮೧ ಸಂಘದ ಅವರಣದಲ್ಲಿ ನಡೆಯಲಿದ್ದು, ಶ್ರೀಕ್ಷೇತ್ರ್ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಪೂರ್ಣಾನಂದಪುರಿ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮಗ ನಡೆಯಲಿದೆ.
ಈ ಸಮಾವೇಶಕ್ಕೆ ೩೧ ಜಿಲ್ಲೆಗಳಿಂದ ಗಾಣಿಗ ಸಮುದಾಯದವರು ಭಾಗವಹಿಸಬೇಕೆಂಬುವುದು ನಮ್ಮೆಲ್ಲರ ಮಹಾದಾಸೆಯಾಗಿದೆ. ಹೀಗಾಗಿ ಈ ಕಾರ್ಯಕ್ರಮ ಜಿಲ್ಲೆಯಿಂದ ಒಂದು ಸಾವಿರಕ್ಕು ಹೆಚ್ಚು ಗಾಣಿಗ ಸಮಾಜದ ಬಂಧುಗಳು ಆಗಮಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ಜ್ಯೋತಿಪಣ ಗಾಣಿಗರ ಸಂಘದ ಅಧ್ಯಕ್ಷ ಅಂಕಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಬೆಂಗಳೂರಿನಲ್ಲಿ ಡಿ. ೨ರಂದು ಶ್ರೀಮಠದ ಅಧ್ಯಕ್ಷರಾದ ಶ್ರೀ ಪೂರ್ಣಾನಂದಪುರಿ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯುವ ಸಮಾವೇಶಕ್ಕೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಬಂಧುಗಳು ಭಾಗವಹಿಸುವ ವ್ಯವಸ್ಥೆ ಮಾಡಲಾಗುತ್ತದೆ. ಹಳ್ಳಿ ಹಳ್ಳಿಗಳಲ್ಲಿರುವ ಗಾಣಿಗರ ಸಮುದಾಯದ ಬಂಧುಗಳನ್ನು ಸಂಘಟಿಸಿ, ಮಾಹಿತಿ ನೀಡಿ, ಸಮಾವೇಶವನ್ನು ತನು, ಮನ, ಧನಗಳನ್ನು ಅರ್ಪಿಸಿ ಯಶಸ್ವಿಗೊಳಿಸೋಣ. ನಮ್ಮ ಹಕ್ಕು ಪಡೆದುಕೊಳ್ಳಲು ನಾವೆಲ್ಲರು ಸಂಘಟಿತರಾಗಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಸಂಘದ ಜಂಟಿ ಕಾರ್ಯದರ್ಶಿ ಚೆನ್ನಕಾಳಶೆಟ್ಟಿ, ನಿರ್ದೇಶಕ ವೆಂಕಟೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಮಶೆಟ್ಟಿ, ಕಾರ್ಯಾಧ್ಯಕ್ಷ ಜಿ. ಶಿವಕುಮಾರ್, ಉಪಾಧ್ಯಕ್ಷರಾದ ಆರ್. ಸಿದ್ದರಾಜು, ವೆಂಕಟಚಲ ಯಳಂದೂರು, ಕೂಡ್ಲುರು ರಂಗಸ್ವಾಮಿ, ಹಂಗಳ ನಂಜಪ್ಪ, ಸಂಘಟನಾ ಕಾರ್ಯದರ್ಶಿ ಮಂಜುಧರ್ ಗುಂಡ್ಲುಪೇಟಡ, ಸಾಂಸ್ಕೃತಿಕ ಕಾರ್ಯದರ್ಶಿ ಮಲ್ಲಶೆಟ್ಟಿ, ಗುಂಡ್ಲುಪೇಟೆ ಯುವಕರ ಸಂಘದ ಅಧ್ಯಕ್ಷ ದೀಪಕ್, ಕಾರ್ಯದರ್ಶಿ ಪುಟೇಶ್ ಸೇರಿದಂತೆ ಇತರರು ಹಾಜರಿದ್ದರು.