Tuesday, April 22, 2025
Google search engine

Homeರಾಜ್ಯರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿ: ಆನ್‌ಲೈನ್ ತರಬೇತಿ ಪೋರ್ಟಲ್ ಹಾಗೂ KASS ಯೋಜನೆಗೆ ಚಾಲನೆ

ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿ: ಆನ್‌ಲೈನ್ ತರಬೇತಿ ಪೋರ್ಟಲ್ ಹಾಗೂ KASS ಯೋಜನೆಗೆ ಚಾಲನೆ

ಬೆಂಗಳೂರು: ಕರ್ನಾಟಕ ರಾಜ್ಯದ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ಸಿಕ್ಕಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆನ್‌ಲೈನ್ ತರಬೇತಿ ಪೋರ್ಟಲ್ ಮತ್ತು ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (KASS)’ಗೆ ಚಾಲನೆ ನೀಡಿದ್ದಾರೆ.

1997ರ ತರಬೇತಿ ನೀತಿಯ ಪ್ರಕಾರ, ಆಡಳಿತ ತರಬೇತಿ ಸಂಸ್ಥೆ, ಜಿಲ್ಲಾ ತರಬೇತಿ ಕೇಂದ್ರಗಳು ಮತ್ತು ಸಚಿವಾಲಯ ತರಬೇತಿ ಸಂಸ್ಥೆಗಳ ಮೂಲಕ ನೌಕರರ ಸಾಮರ್ಥ್ಯಾಭಿವೃದ್ಧಿಗೆ ಈ ಪೋರ್ಟಲ್ ಒಂದು ಹೊಸ ಹೆಜ್ಜೆ. I-GoT ವೇದಿಕೆಯಲ್ಲಿ ಸಹಭಾಗಿತ್ವದಿಂದ ನಿರ್ಮಿತವಾದ https://atimysore.karnataka.gov.in ಎಂಬ ಆನ್‌ಲೈನ್ ಪೋರ್ಟಲ್‌ನಲ್ಲಿ ಈಗಾಗಲೇ 4.55 ಲಕ್ಷಕ್ಕೂ ಹೆಚ್ಚು ನೌಕರರು ನೋಂದಾಯಿಸಿದ್ದಾರೆ. HRMS ಮೊಬೈಲ್ ಸಂಖ್ಯೆಯ ಮೂಲಕ ಲಾಗಿನ್ ಆಗಿ, ಎಲ್ಲ ಸಿಬ್ಬಂದಿ ತರಬೇತಿಗಳನ್ನು ತಾವು ಇಚ್ಛಿಸಿದಾಗ ಪಡೆಯಬಹುದು.

ಈ ಪೋರ್ಟಲ್‌ ಮೂಲಕ ಈಗಾಗಲೇ 10 ತರಬೇತಿ ಮಾಡ್ಯೂಲ್‌ಗಳು ಲಭ್ಯವಿದ್ದು, ಇನ್ನೂ ಹಲವಾರು ಮಾಡ್ಯೂಲ್‌ಗಳನ್ನು ಸೇರಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ಕ್ರಮವು ಕೇವಲ ವೈಯಕ್ತಿಕ ಸಾಮರ್ಥ್ಯವರ್ಧನೆಗಷ್ಟೇ ಸೀಮಿತವಲ್ಲದೆ, ಆಡಳಿತದ ಗುಣಮಟ್ಟ ಹಾಗೂ ಸಾರ್ವಜನಿಕ ಸೇವೆಯ ಮಟ್ಟವನ್ನು ಕೂಡ ಹೆಚ್ಚಿಸುವ ಭರವಸೆಯಿದೆ.

ಇದೆ ಸಂದರ್ಭದಲ್ಲಿ, KASS ಯೋಜನೆಯ ಮೂಲಕ ಸುಮಾರು 6 ಲಕ್ಷ ನೌಕರರು ಹಾಗೂ ಅವರ 25 ಲಕ್ಷ ಕುಟುಂಬ ಸದಸ್ಯರು ನಗದು ರಹಿತ ಆರೋಗ್ಯ ಸೇವೆ ಪಡೆಯಲಿದ್ದಾರೆ. ಮೊದಲ ಹಂತದಲ್ಲಿ 2000ಕ್ಕೂ ಅಧಿಕ ಚಿಕಿತ್ಸಾ ವಿಧಾನಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಸಿಗಲಿದೆ. ಈ ಯೋಜನೆಗಳು ನೌಕರರ ವೃತ್ತಿಪರ ಅಭಿವೃದ್ಧಿ ಮತ್ತು ಆರೋಗ್ಯದ ಕಾಳಜಿಗೆ ರಾಜ್ಯ ಸರ್ಕಾರದ ಬದ್ಧತೆಯ ಪ್ರತಿರೂಪಗಳಾಗಿವೆ.

RELATED ARTICLES
- Advertisment -
Google search engine

Most Popular