ಬೆಂಗಳೂರು: ಕಳೆದ ಎರಡು ವರ್ಷಗಳಿಂದ ಹೊಸ ರೇಷನ್ ಕಾರ್ಡ್ ಬೇಕು ಎಂದು ಕಾಯುತ್ತಿರುವ ಜನರಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್ ಕೊಟ್ಟಿದ್ದು, ಹೊಸ ಕಾರ್ಡ್‌ಗಳನ್ನ ಶೀಘ್ರದಲ್ಲಿ ಕೊಡಲಾಗುತ್ತದೆ ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಭರವಸೆ ಕೊಟ್ಟಿದ್ದಾರೆ.
ಅರ್ಹತೆ ಇಲ್ಲದವರನ್ನ ಎಪಿಎಲ್‌ಗೆ ಸೇರಿಸಲಾಗುತ್ತೆ: ಕೋಲಾರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಾರಿಗೆಲ್ಲಾ ಬಿಪಿಎಲ್ ಕಾರ್ಡ್ ಪಡೆಯಲು ಅರ್ಹತೆ ಇಲ್ಲವೋ ಅವರನ್ನ ಎಪಿಎಲ್ ಪಟ್ಟಿಗೆ ಸೇರಿಸುವ ಕೆಲಸ ನಡೆಯುತ್ತಿದೆ. ಅರ್ಹತೆ ಇರುವ ಎಲ್ಲರಿಗೂ ಬಿಪಿಎಲ್ ಕಾರ್ಡ್‌ಗಳನ್ನು ಕೊಡಲಾಗುತ್ತದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಸುಮಾರು 1.28 ಕೋಟಿ ಬಿಪಿಎಲ್ ಕಾರ್ಡ್ ಗಳು ಇದೆ. ಈ ಕಾರ್ಡ್‌ಗಳಲ್ಲಿ ಸುಮಾರು 4.50 ಕೋಟಿ ಜನರು ಫಲಾನುಭವಿಗಳಿದ್ದಾರೆ. ಸದ್ಯ ನಾವು ಬಿಪಿಎಲ್ ಕಾರ್ಡ್ಗಳ ಪರಿಷ್ಕರಣೆ ಮಾಡುತ್ತಿದ್ದೇವೆ. ಯಾರೆಲ್ಲಾ ಬಿಪಿಎಲ್ ಕಾರ್ಡ್ ಪಡೆಯಲು ಅನರ್ಹರಿದ್ದಾರೋ ಅವರನ್ನ ಬಿಪಿಎಲ್‌ನಿಂದ ಎಪಿಎಲ್‌ಗೆ ಹಾಕುತ್ತೇವೆ ಎಷ್ಟೇ ಎಂದು ಹೇಳಿದ್ದಾರೆ.
ಇನ್ನು ರಾಜ್ಯದಲ್ಲಿ ಕಳೆದ ಎರಡೂ ವರ್ಷಗಳಿಂದ ಯಾವುದೇ ಹೊಸ ಬಿಪಿಎಲ್ ಕಾರ್ಡ್‌ಗಳನ್ನ ಕೊಡಲಾಗುತ್ತಿಲ್ಲ. 2023ರ ನಂತರ ಯಾವುದೇ ಹೊಸ ಅರ್ಜಿಗಳನ್ನ ಸ್ವೀಕರಿಸಿಲ್ಲ. ಆದರೆ ಕೇವಲ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು, ಹೊಸ ಸದಸ್ಯರನ್ನ ಸೇರಿಸಲು ಹಾಗೆಯೇ, ಸದಸ್ಯರನ್ನ ಹೊರಗೆ ಹಾಕಲು ಸೇರಿದಂತೆ ಯಜಮಾನನ ಹೆಸರು ಬದಲಾವಣೆ, ಬಿಪಿಎಲ್‌ನಿಂದ ಬಿಪಿಎಲ್‌ಗೆ ಹಾಗೂ ಎಪಿಎಲ್‌ನಿಂದ ಬಿಪಿಎಲ್‌ಗೆ ಬದಲಾವಣೆ ಮಾಡಲು ಅವಕಾಶಗಳನ್ನ ಕೊಡಲಾಗಿತ್ತು. ಹೊಸ ಅರ್ಜಿ ಹಾಕಲು ಅನೇಕ ಜನರು ಕಾಯುತ್ತಿದ್ದಾರೆ.
ಈ ಹಿಂದೆ ಉಡುಪಿಯಲ್ಲಿ ಮಾತನಾಡಿದ್ದ ಅವರು, ಬಿಪಿಎಲ್ ಕಾರ್ಡ್ ವಿಚಾರವಾಗಿ ಜನರಲ್ಲಿ ಮೂಡಿದ್ದ ಗೊಂದಲಕ್ಕೆ ತೆರೆ ಎಳೆದಿದ್ದರು, ಯಾವುದೇ ಕಾರಣಕ್ಕೂ ಕಾರ್ಡುಗಳನ್ನು ರದ್ದು ಮಾಡುವುದಿಲ್ಲ ಎಂದು ಭರವಸೆ ನೀಡಿದ್ದರು. ಸರ್ಕಾರ ಯಾವುದೇ ಕಾರಣಕ್ಕೂ ಸರ್ಕಾರದ ಮಾನದಂಡ ಬಿಟ್ಟು ಪರಿಷ್ಕರಣೆ ಮಾಡಲ್ಲ. ಯಾರೆಲ್ಲಾ ಬಿಪಿಎಲ್ ಕಾರ್ಡ್ ಪಡೆಯಲು ಅನರ್ಹ ಇದೃೋ ಅವರೇ ಹೊರಗೆ ಬನ್ನಿ. ಹೊಸ ಬಿಪಿಎಲ್ ಕಾರ್ಡ್ ಅವಶ್ಯಕತೆ ಇರುವವರಿಗೆ ಅವಕಾಶ ಮಾಡಿಕೊಡಿ. ಅನ್ನ ಭಾಗ್ಯ ರಾಜ್ಯದ ಕಟ್ಟ ಕಡೆಯ ವ್ಯಕ್ತಿಗೆ ತಲುಪಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ. ಮನೆ ಕಟ್ಟುವ ಜನರಿಗೆ ಬಿಪಿಎಲ್ ಕಾರ್ಡ್ ಅವಶ್ಯಕತೆ ಇರುವುದಿಲ್ಲ. ಯಾರಿಗೆ ಅವಶ್ಯಕತೆ ಇರುವುದಿಲ್ಲವೋ ಅವರನ್ನ ಎಪಿಎಲ್‌ಗೆ ಸೇರಿಸಲಾಗುತ್ತದೆ ಎಂದು ಹೇಳಿದ್ದರು.
ದಕ್ಷಿಣ ಭಾರತದಲ್ಲಿಯೇ ಅತಿಹೆಚ್ಚು ಬಿಪಿಎಲ್ ಪಡಿತರ ಚೀಟಿ ಹೊಂದಿರುವ ರಾಜ್ಯ ಕರ್ನಾಟಕ. ಇದೇ ಕಾರಣಕ್ಕೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇಲ್ಲಿನ ರಾಜ್ಯ ಸರ್ಕಾರಕ್ಕೆ ಬಿಪಿಎಲ್ ಪಡಿತರ ಚೀಟಿಗಳ ಅರ್ಹರಾಗಲು ಕೆಲವು ಮಾನದಂಡಗಳನ್ನು ಬಿಡುಗಡೆ ಮಾಡಿದೆ. ಆ ಮಾನದಂಡಗಳ ಅಡಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಬಿಪಿಎಲ್ ಪಡಿತರ ಚೀಟಿಗಳನ್ನು ಎಪಿಎಲ್ ಕಾರ್ಡಗಳಾಗಿ ಪರಿವರ್ತನೆ ಮಾಡಲಾಗುತ್ತಿದೆ.