ಕಬಿನಿ ನದಿ ಪಾತ್ರದಲ್ಲಿ ಮುಂಜಾಗ್ರತೆ ವಹಿಸಲು ಡಿಸಿ ಸೂಚನೆ
ಮೈಸೂರು : ಕಳೆದೊಂದು ವಾರದಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಜಲಾಶಯಗಳ ಒಳಹರಿವು ಹೆಚ್ಚಳವಾಗಿದ್ದು, ನೀರಿನ ಮಟ್ಟ ಹೆಚ್ಚಾಗಿ ಜಲಾಶಯಗಳಿಗೆ ಜೀವಕಳೆ ಬಂದಿದೆ.
ಕೇರಳದ ವೈನಾಡು ಹಾಗೂ ಮಡಿಕೇರಿಯಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ ಕೆಆರ್‌ಎಸ್, ಕಬಿನಿ, ನುಗು ಜಲಾಶಯದ ಒಳಹರಿವು ಹೆಚ್ಚಾಗಿದ್ದು, ನೀರಿನ ಮಟ್ಟ ಏರಿಕೆಯಾಗಿದೆ. ಕಬಿನಿ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಕೆಆರ್‌ಎಸ್ ನೀರಿನ ಮಟ್ಟ ೧೧೧ ಅಡಿ ತಲುಪಿದೆ. ಪ್ರಸ್ತುತ ಕಬಿನಿ ನೀರಿನ ಮಟ್ಟ ೨೨೮೨.೩೩ ಅಡಿ ಇದ್ದು, ೩೩,೬೪೦ ಕ್ಯುಸೆಕ್ ಒಳಹರಿವಿದೆ. ಜಲಾಶಯದ ಭದ್ರತೆ ದೃಷ್ಟಿಯಿಂದ ೩೩,೬೨೫ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಕೆಆರ್‌ಎಸ್ ನೀರಿನ ಮಟ್ಟ ೧೧೧.೬೦ ಅಡಿಗೆ ತಲುಪಿದ್ದು, ೩೬,೬೭೪ ಕ್ಯುಸೆಕ್ ಒಳ ಹರಿವಿದ್ದರೆ ೨೩೬೧ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ತಾರಕ ಹಾಗೂ ನುಗು ಡ್ಯಾಂನ ನೀರಿನ ಮಟ್ಟವೂ ಹೆಚ್ಚಳವಾಗಿದ್ದು, ಭದ್ರತಾ ದೃಷ್ಟಿಯಿಂದ ನೀರನ್ನು ಹೊರಬಿಡಲಾಗಿದೆ.