ಮಂಡ್ಯ: ಕೆ.ಆರ್.ಪೇಟೆ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರೈತರ ಹೋರಾಟಕ್ಕೆ ವರ್ತಕರಿಂದ ಬೆಂಬಲ ಸೂಚಿಸಿದ್ದು, ಅಂಗಡಿ ಮುಂಗಟ್ಟು ಓಪನ್ ಮಾಡದೆ ಅನ್ನದಾತರಿಗೆ ಸಾಥ್ ನೀಡಿದ್ದಾರೆ.
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಗೆ ವರ್ತಕರಿಂದಲೂ ಆಕ್ರೋಶ ವ್ಯಕ್ತವಾಗಿದ್ದು, ಬಂದ್ ಗೆ ಬೆಂಬಲ ನೀಡುವ ಮೂಲಕ ಸರ್ಕಾರ ಹಾಗೂ ಪ್ರಾಧಿಕಾರ ವಿರುದ್ದ ಕಿಡಿಕಾರಿದ್ದಾರೆ.
ಅಗತ್ಯ ವಸ್ತುಗಳ ಮಾರಾಟ ಹೊರತುಪಡಿಸಿ ಬಹುತೇಕ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ.

ಕನ್ನಡ, ರೈತ ಪರ ಸಂಘಟನೆಗಳಿಂದ ಕೆಆರ್ ಪೇಟೆ ಬಂದ್ ಕರೆ ನೀಡಲಾಗಿದ್ದು, ಕೆಆರ್ ಪೇಟೆ ಪಟ್ಟಣದಲ್ಲಿ ಪ್ರತಿಭಟನೆ ಆರಂಭವಾಗಿದೆ. ಕನ್ನಡ ಪರ ಸಂಘಟನೆಗಳು ಬೈಕ್ ರ್ಯಾಲಿ ನಡೆಸಿವೆ. ರಾಜ್ಯ ಸರ್ಕಾರದ ಹಾಗೂ ಪ್ರಾಧಿಕಾರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದ್ದು, ಕಾವೇರಿ, ಹೇಮಾವತಿ ಉಳಿಸಿ ಎಂದು ಆಗ್ರಹಿಸಿದ್ದಾರೆ