ಮೈಸೂರು: ನಗರದ ನಂಜುಮಳಿಗೆ ಸಮೀಪ ಇರುವ ಶ್ರೀ ವೇಣುಗೋಪಾಲ ಕೃಷ್ಣ ಸ್ವಾಮಿ ದೇವಸ್ಥಾನ ಮುಂಭಾಗ ಅಪೂರ್ವ ಸ್ನೇಹ ಬಳಗದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಗೋ ಪೂಜೆ ಸಲ್ಲಿಸಿ ಗೋವುಗಳಿಗೆ ಮೇವು ವಿತರಿಸಲಾಯಿತು.
ಮಾಜಿನಗರಪಾಲಿಕ ಸದಸ್ಯರಾದ ಮ ವಿ ರಾಮಪ್ರಸಾದ್ ಮಾತನಾಡಿ, ಕೃಷ್ಣ ಪರಮಾತ್ಮ ಬೋಧಿಸಿದ ಗೀತೋಪದೇಶದ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು, ಉತ್ತಮವಾದ ಸಮಾಜ ನಿರ್ಮಾಣ ಮಾಡೋಣ’ , ಭಾರತದಲ್ಲಿ ಮಾತ್ರವಲ್ಲದೇ ಜಗತ್ತಿನ ಎಲ್ಲ ರಾಷ್ಟ್ರಗಳಲ್ಲೂ ಕೃಷ್ಣನನ್ನು ಆರಾಧಿಸುತ್ತಾರೆ. ಜಯಂತಿಯನ್ನು ವಿಶ್ವದಾದ್ಯಂತ ವಿವಿಧ ರಾಗಗಳು ವಿಜೃಂಭಣೆಯಿಂದ ಆಚರಿಸುತ್ತಿರುವುದು ಕೃಷ್ಣನ ಜನಪ್ರಿಯತೆಯನ್ನು ಪ್ರತಿಬಿಂಬಿಸುತ್ತದೆ ಎಂದರು.
ನಂತರ ಮಾತನಾಡಿದ ಅಪೂರ್ವ ಸ್ನೇಹ ಬಳಗದ ಅಧ್ಯಕ್ಷ ಅಪೂರ್ವ ಸುರೇಶ್ ಶ್ರೀಕೃಷ್ಣನ ಕೊಳಲು ಪ್ರೀತಿ ಸಹೋದರತ್ವದ ಸಂಕೇತವಾಗಿದೆ. ಈ ಒಳಾರ್ಥವನ್ನು ನಾವಿಂದು ಅರ್ಥಮಾಡಿಕೊಳ್ಳಬೇಕಿದೆ ಪ್ರೀತಿ, ಸೋದರತ್ವದ ಸಂಕೇತವಾದ ಶ್ರೀಕೃಷ್ಣನ ಕೊಳಲನ್ನು ನಾವಿಂದು ಮರೆತು ಬಿಟ್ಟಿದ್ದೇವೆ.
ಮಹಾಭಾರತ ಯುದ್ಧ ಮನುಷ್ಯನ ಜೀವನದಲ್ಲಿ ನಿತ್ಯ ನಡೆಯುವ ಘಟನೆಗಳೇ ಆಗಿವೆ. ಪ್ರೀತಿ, ವಿಶ್ವಾಸದಿಂದ ಬದುಕಿದರೆ ಎಲ್ಲರ ಮನಸ್ಸನ್ನು ಗೆಲ್ಲಬಹುದು ಎಂಬ ಸಂದೇಶ ಶ್ರೀಕೃಷ್ಣ ದೇವರು ನೀಡಿದ್ದಾರೆ
ಸತ್ಯ, ನ್ಯಾಯಕ್ಕಾಗಿ ಹೋರಾಟ ನಡೆಸಿದ ಶ್ರೀಕೃಷ್ಣ. ಸಮಾಜದಲ್ಲಿ ಇಂದಿಗೂ ಕಂಸ, ದುರ್ಯೋಧನರು ಇದ್ದಾರೆ, ಅಂಥ ಶಕ್ತಿಯ ನಾಶಕ್ಕೆ ಪ್ರಯತ್ನ ಮಾಡುವ ಚಿಂತನೆ ಮಾಡಬೇಕಾಗಿದೆ’ ಎಂದರು.
ಇದೇ ಸಂದರ್ಭದಲ್ಲಿ ಮಾಜಿನಗರ ಪಾಲಿಕೆ ಸದಸ್ಯರಾದ ಮ ವಿ ರಾಮಪ್ರಸಾದ್, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಅಂಬಲೆ ಶಿವಣ್ಣ, ರಾಕೇಶ್ , ಆನಂದ್, ಪ್ರಕಾಶ್, ಧನರಾಜ್ ಇದ್ದರು.