ಮುಂಬೈ: ಮಹಾರಾಷ್ಟ್ರದ ಭಂಡಾರದಿಂದ ಗೊಂಡಿಯಾಗೆ ತೆರಳುತ್ತಿದ್ದ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ 10 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದ ಸ್ಥಳದ ದೃಶ್ಯಗಳು ವಾಹನದ ಸುತ್ತಲೂ ಭಾರಿ ಜನಸಮೂಹ ಜಮಾಯಿಸಿರುವುದನ್ನ ತೋರಿಸುತ್ತದೆ, ಗಾಯಗೊಂಡವರಿಗೆ ಸಹಾಯ ಮಾಡಲು ಪೊಲೀಸ್ ವ್ಯಾನ್ಗಳು, ಆಂಬ್ಯುಲೆನ್ಸ್ಗಳು ಮತ್ತು ಕ್ರೇನ್ಗಳನ್ನು ನಿಯೋಜಿಸಲಾಗಿದೆ.
ಅಪಘಾತಕ್ಕೆ ಕಾರಣವೇನು ಎನ್ನುವುದನ್ನ ಪತ್ತೆ ಹಚ್ಚಬೇಕಿದ್ದು, ಗಾಯಗೊಂಡ ಹಲವರನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗೊಂಡಿಯಾ ಜಿಲ್ಲೆಯ ಗೊಂಡಿಯಾ-ಅರ್ಜುನಿ ರಸ್ತೆಯ ಬಿಂದ್ರವನ ತೋಲಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಸ್ ನಾಗ್ಪುರದಿಂದ ಗೊಂಡಿಯಾಗೆ ಹೋಗುತ್ತಿತ್ತು.
ಗೊಂಡಿಯಾ ಜಿಲ್ಲೆಯಲ್ಲಿ ರಾಜ್ಯ ಸಾರಿಗೆ ಬಸ್ ಅಪಘಾತಕ್ಕೀಡಾಗಿದೆ. ಬಸ್ ಭಂಡಾರ ಡಿಪೋದಿಂದ ಗೊಂಡಿಯಾಗೆ ತೆರಳುತ್ತಿದ್ದಾಗ ಗೊಂಡಿಯಾ-ಅರ್ಜುನಿ ರಸ್ತೆಯ ಬಿಂದ್ರವನ ತೋಲಾ ಗ್ರಾಮದ ಬಳಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿಯಾಗಿದೆ. ಎಂಟು ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 30 ಜನರು ಗಾಯಗೊಂಡಿದ್ದಾರೆ” ಎಂದು ಪೊಲೀಸರು ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿದ್ದಾರೆ.