ಮದ್ದೂರು: ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವುದರ ಮೂಲಕ ಸರ್ಕಾರಿ ಮಕ್ಕಳಿಗೆ ಉತ್ಕೃಷ್ಟ ಮಟ್ಟದ ವಿದ್ಯಾಭ್ಯಾಸ ದೊರಕುವಂತೆ ಮಾಡಬೇಕು ಎಂದು ಗ್ರಾ. ಪಂ ಮಾಜಿ ಅಧ್ಯಕ್ಷ ಹಾಗೂ ಕೃಷ್ನೇಗೌಡ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ನಂದೀಶ್ ಗೌಡ ತಿಳಿಸಿದರು.
ತಾಲ್ಲೂಕಿನ ಹೆಮ್ಮನಹಳ್ಳಿ ಗ್ರಾ. ಪಂ ವ್ಯಾಪ್ತಿಯ ಹುಳುಗನಹಳ್ಳಿ ಯ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತವಾಗಿ ಬೈಸಿಕಲ್ ಗಳನ್ನು ವಿತರಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಲವು ವರ್ಷಗಳಿಂದ ನಮ್ಮ ತಂದೆಯವರಾದ ದಿ. ಕೃಷ್ಣೆಗೌಡ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೈಲಾದ ಮಟ್ಟಿಗೆ ಜನಪರ ಸೇವೆಗಳನ್ನು ಮಾಡಿಕೊಂಡು ಬರುತ್ತಿದ್ದು, ಕೋವಿಡ್ ಸಂಧರ್ಭದಲ್ಲಿ ಹುಳುಗನಹಳ್ಳಿ ಗ್ರಾಮದ ಜನರಿಗೆ ಅಗತ್ಯ ಅರೋಗ್ಯ ಕಿಟ್ ಗಳನ್ನು ನೀಡುವುದು, ಗ್ರಾಮದ ಸರ್ಕಾರಿ ಶಾಲೆಗೆ ಟಿ. ವಿ, ಡೆಸ್ಕ್ ಗಳು ಮಕ್ಕಳಿಗೆ ಸಮವಸ್ತ್ರ, ನೋಟ್ ಬುಕ್ ಸೇರಿದಂತೆ ಅಗತ್ಯ ಪಠ್ಯ ಪರಿಕರಗಳನ್ನು ನೀಡುವುದು, ಶಾಲಾ ಕೊಠಡಿ ನಿರ್ಮಾಣಕ್ಕೆ ಸಹಾಯ,ಹೆಮ್ಮನಹಳ್ಳಿ ಗ್ರಾ. ಪಂ ವ್ಯಾಪ್ತಿಯ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತವಾಗಿ ಮೊಟ್ಟೆ, ಬ್ಯಾಂಡ್ ಸೆಟ್ ವಿತರಣೆ ಸೇರಿದಂತೆ ಹಲವಾರು ಸಾಮಾಜಿಕ ಕೆಲಸಗಳನ್ನು ಮಾಡಿಕೊಂಡು ಬರಲಾಗುತ್ತಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕಾಳೀರಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ದೊರಕುತ್ತಿದ್ದರೂ ಮಕ್ಕಳ ಕೊರತೆಯಿದೆ ಆದರೆ ನಂದೀಶ್ ಗೌಡ ರಂತಹ ದಾನಿಗಳು ಪ್ರತಿ ಗ್ರಾ. ಪಂ ಗಳಲ್ಲೂ ಇದ್ದರೆ ಸರ್ಕಾರಿ ಶಾಲೆಗಳು ಆಧುನಿಕಗೊಂಡು ಹಲವು ಅಗತ್ಯ ಸೌಕರ್ಯಗಳನ್ನು ಒದಗಿಸಿಕೊಡುವುದಕ್ಕೆ ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾ. ಪಂ ಅಧ್ಯಕ್ಷೆ ವೀಣಾ, ಉಪಾಧ್ಯಕ್ಷ ಅಪ್ಪಾಜಿಗೌಡ, ಪಿಡಿಓ ಲೀಲಾವತಿ, ಸಿ ಡಿ ಪಿ ಓ ನಾರಾಯಣ್, ಮುಖಂಡರಾದ ಹೆಮ್ಮನಹಳ್ಳಿ ಜೈ ಶಂಕರ್ ಸೇರಿದಂತೆ ಗ್ರಾ. ಪಂ ಸದಸ್ಯರು ಹಾಗೂ ಶಾಲೆಯ ಶಿಕ್ಷಕರು ಹಾಜರಿದ್ದರು.