Monday, December 2, 2024
Google search engine

Homeರಾಜ್ಯಸುದ್ದಿಜಾಲಸರ್ಕಾರಿ ನೌಕರರ ಗೃಹ ನಿರ್ಮಾಣ ಸಂಘಕ್ಕೆ ಕೆ.ಎನ್. ಅಣ್ಣೇಗೌಡ ಅಧ್ಯಕ್ಷ

ಸರ್ಕಾರಿ ನೌಕರರ ಗೃಹ ನಿರ್ಮಾಣ ಸಂಘಕ್ಕೆ ಕೆ.ಎನ್. ಅಣ್ಣೇಗೌಡ ಅಧ್ಯಕ್ಷ

ಮೈಸೂರು: ಮೈಸೂರಿನ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಮಂಗಳವಾರ ನಡೆಯಿತು.

ಚಾಮರಾಜ ಜೋಡಿ ರಸ್ತೆಯಲ್ಲಿರುವ ಸಹಕಾರ ಭವನದ ಕಟ್ಟಡದಲ್ಲಿನ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯನ್ನು ಸಹಕಾರ ಇಲಾಖೆಯ ಸಿಡಿಒ ರವಿ ನಿರ್ವಹಿಸಿದರು.

ಸಂಘದ ಎರಡು ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಅಧ್ಯಕ್ಷರಾಗಿ ಕೆ.ಎನ್. ಅಣ್ಣೇಗೌಡ ಹಾಗೂ ಉಪಾಧ್ಯಕ್ಷರಾಗಿ ಬಿ.ಸಿ.ಲೋಕೇಶ್ ಅವಿರೋಧವಾಗಿ ಆಯ್ಕೆಯಾದರು. ಎರಡೂ ಹುದ್ದೆಗಳಿಗೆ ಬೇರೆ ಯಾರೂ ಉಮೇದುವಾರಿಕೆ ಬಯಸಿ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಅಣ್ಣೇಗೌಡ ಹಾಗೂ ಲೋಕೇಶ್ ಅವರ ಆಯ್ಕೆಯನ್ನು ಘೋಷಿಸಿದರು.

ನೂತನವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಅಣ್ಣೇಗೌಡ ಹಾಗೂ ಲೋಕೇಶ್ ಅವರನ್ನು ಸಂಘದ ನಿರ್ದೇಶಕರು‌ ಅಭಿನಂದಿಸಿದರು. ಸಂಘದಲ್ಲಿ ಒಟ್ಟು ೧೩ ಮಂದಿ ನಿರ್ದೇಶಕರಿದ್ದು, ಮುಂದಿನ ಐದು ವರ್ಷಗಳ ಕಾಲ ಈ ಆಯ್ಕೆ ನಡೆದಿದೆ.

RELATED ARTICLES
- Advertisment -
Google search engine

Most Popular