ಬಳ್ಳಾರಿ: ಇಂಧನ ವಸ್ತುಗಳ ಬಳಕೆಯಲ್ಲಿ ಅವುಗಳ ಕಾರ್ಯ ಮತ್ತು ತಂತ್ರಜ್ಞಾನ ಅರಿತುಕೊಳ್ಳಬೇಕು ಎಂದು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ವಿಭಾಗೀಯ ಕಚೇರಿಯ ಜಂಟಿ ನಿರ್ದೇಶಕ ರವೀಂದ್ರನಾಥ್ ಎಸ್. ವೈನಿ ಹೇಳಿದರು.
ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಹಾಗೂ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದಲ್ಲಿ ಪಂಪ್, ಉಪಕರಣ ತಂತ್ರಜ್ಞರಿಗೆ ಇಂಧನ ಕ್ಷಮತೆ ಕಾರ್ಯಾಗಾರಕ್ಕೆ ಸೋಮವಾರ ಏರ್ಪಡಿಸಿದ್ದ ಒಂದು ದಿನದ ತಾಂತ್ರಿಕ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು. ಕಾರ್ಯಾಗಾರವನ್ನು ಸದುಪಯೋಗಪಡಿಸಿಕೊಂಡು ಕ್ಷೇತ್ರದಲ್ಲಿ ಅಭಿವೃದ್ಧಿಯಾಗಬೇಕು ಎಂದರು.
ಇದೇ ವೇಳೆ ತರಬೇತುದಾರರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸರಕಾರಿ ಕೈಗಾರಿಕಾ ಸಂಸ್ಥೆಯ ಪ್ರಾಚಾರ್ಯ ಕೆ. ಎಚ್.ಎಂ.ಪಂಡಿತಾರಾಧ್ಯ, ತರಬೇತಿ ಅಧಿಕಾರಿ ಎಸ್.ಎ.ಬಿರಾದಾರ್, ಮೊಹಮ್ಮದ್ ಜುನೈದ್, ಕಿರಿಯ ತರಬೇತಿ ಅಧಿಕಾರಿಗಳಾದ ವೆಂಕಟೇಶ್. ಟಿ, ಚಂದ್ರಶೇಖರರೆಡ್ಡಿ, ಗೊಂವಿದಪ್ಪ, ಟಿ.ಚೆನ್ನಬಸವ, ಶ್ರೀನಿವಾಸುಲು, ಎಚ್.ಎಂ.ಇಂದಿರಾ, ಎಚ್.ಚಂದ್ರಿಕಾ ಸೇರಿದಂತೆ 120 ಮಂದಿ ಪ್ರಶಿಕ್ಷಣಾರ್ಥಿಗಳು ಹಾಜರಿದ್ದರು.