Wednesday, April 29, 2026
Google search engine

Homeಬ್ರೇಕಿಂಗ್ ನ್ಯೂಸ್ಉದ್ಯೋಗಗಿಗ್ ಕಾರ್ಮಿಕರಿಗಾಗಿ ಶೀಘ್ರದಲ್ಲೇ ಪಿಂಚಣಿ, ಮಾತೃತ್ವ ಸೌಲಭ್ಯ ಸೇರಿ ಭದ್ರತೆ ಯೋಜನೆ ಜಾರಿ..!

ಗಿಗ್ ಕಾರ್ಮಿಕರಿಗಾಗಿ ಶೀಘ್ರದಲ್ಲೇ ಪಿಂಚಣಿ, ಮಾತೃತ್ವ ಸೌಲಭ್ಯ ಸೇರಿ ಭದ್ರತೆ ಯೋಜನೆ ಜಾರಿ..!

ಬೆಂಗಳೂರು: ಕರ್ನಾಟಕದ ಗಿಗ್ ಕಾರ್ಮಿಕರಿಗೆ ಶೀಘ್ರದಲ್ಲೇ ಸಾಮಾಜಿಕ ಭದ್ರತಾ ಸೌಲಭ್ಯಗಳು ಲಭ್ಯವಾಗುವ ಸಾಧ್ಯತೆ ಇದೆ. ಗಿಗ್​ ಕಾರ್ಮಿಕರಿಗೆ ಅಪಘಾತ ಸಂಭವಿಸಿ ಶಾಶ್ವತ ಅಂಗವೈಕಲ್ಯ ಉಂಟಾದರೆ ಅಂತವರಿಗೆ ಪಿಂಚಣಿ ಹಾಗೂ ಮಹಿಳಾ ಕಾರ್ಮಿಕರಿಗೆ ಮಾತೃತ್ವ ಸೌಲಭ್ಯ ಸೇರಿದಂತೆ ತಿಂಗಳ ಆರ್ಥಿಕ ನೆರವು ನೀಡುವ ಯೋಜನೆ ರೂಪಿಸಲಾಗುತ್ತಿದೆ.

ಕಾರ್ಮಿಕ ಇಲಾಖೆಯು ಅಂತಾರಾಷ್ಟ್ರೀಯ ಸಾಮಾಜಿಕ ಭದ್ರತೆ ಸಂಘ ಮತ್ತು ಅಂತಾರಾಷ್ಟ್ರೀಯ ಕಾರ್ಮಿಕ ಸಂಘ (ILO) ಜೊತೆಗೆ ಸೇರಿ ಈ ಬಗ್ಗೆ ಸಮಗ್ರ ವ್ಯವಸ್ಥೆ ರೂಪಿಸುವ ಕಾರ್ಯದಲ್ಲಿದೆ. ಈ ಯೋಜನೆಯಿಂದ ರಾಜ್ಯದ ಲಕ್ಷಾಂತರ ಗಿಗ್ ಕಾರ್ಮಿಕರಿಗೆ ಲಾಭವಾಗಲಿದೆ.

ಉಬರ್, ಒಲಾ, ಸ್ವಿಗ್ಗಿ, ಝೊಮ್ಯಾಟೊ ಸೇರಿದಂತೆ 23 ಅಗ್ರಿಗೇಟರ್‌ಗಳು 12.19 ಲಕ್ಷ ಗಿಗ್ ಕಾರ್ಮಿಕರ ಮಾಹಿತಿಯನ್ನು ಒದಗಿಸಿವೆ.

RELATED ARTICLES
- Advertisment -
Google search engine

Most Popular