Sunday, August 17, 2025
Google search engine

Homeರಾಜ್ಯಸುದ್ದಿಜಾಲಸಂಗೊಳ್ಳಿ ರಾಯಣ್ಣ ಜಯಂತಿಗೆ ಸರ್ಕಾರಿ ಆದೇಶ ಹೊರಡಿಸಬೇಕು: ಅರುಣ್ ಕಲ್ಲಹಟ್ಟಿ

ಸಂಗೊಳ್ಳಿ ರಾಯಣ್ಣ ಜಯಂತಿಗೆ ಸರ್ಕಾರಿ ಆದೇಶ ಹೊರಡಿಸಬೇಕು: ಅರುಣ್ ಕಲ್ಲಹಟ್ಟಿ

ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಪ್ರತಿವರ್ಷ ಆಗಸ್ಟ್ 15 ರ ಸ್ವಾತಂತ್ರ್ಯೋತ್ಸವ ದಿನ ಸ್ವಾತಂತ್ರ್ಯಕ್ಕೋಸ್ಕರ ಬ್ರಿಟಿಷರೊಂದಿಗೆ ಹೋರಾಡಿ ಹುತಾತ್ಮರಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಜಯಂತಿ ಆಚರಿಸಲು ಶಾಲಾ-ಕಾಲೇಜು ಮತ್ತು ಸರ್ಕಾರಿ ಕಚೇರಿಯಲ್ಲಿ ಆಚರಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸುವಂತೆ ಸಾಲಿಗ್ರಾಮ ತಾಲೂಕು ಸಂಗೊಳ್ಳಿ ರಾಯಣ್ಣ ಯುವ ವೇದಿಕೆ ಅಧ್ಯಕ್ಷ ಚಿಕ್ಕಕೊಪ್ಪಲು ಅರುಣ್ ಕಲ್ಲಹಟ್ಟಿ ಒತ್ತಾಯಿದರು.

ಸಾಲಿಗ್ರಾಮ ತಾಲೂಕಿನ ದೊಡ್ಡಕೊಪ್ಪಲು – ಚಿಕ್ಕಕೊಪ್ಪಲು ಅವಳಿ ಗ್ರಾಮದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಮತ್ತು ಸಂಗೊಳ್ಳಿ ರಾಯಣ್ಣ ಜನ್ಮಾದಿನಾರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಬ್ರಿಟಿಷರೊಂದಿಗೆ ಹೋರಾಡಿ ಸ್ವಾತಂತ್ರ್ಯ ಹೋರಾಟಕ್ಕೆ ತನ್ನದೇ ಅದ ಕೊಡುಗೆ ನೀಡಿರುವ ಸಂಗೊಳ್ಳಿ ರಾಯಣ್ಣ ಅವರ ಹೋರಾಟವನ್ನು ಮನಗೊಂಡು ನಡೆಯುತ್ತಿರುವ ವಿಧಾ‌ನ ಸಭೆಯ ಅಧಿವೇಶನದಲ್ಲಿಯೇ ಈ ಅದೇಶ ಹೊರಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಂದಾಗ ಬೇಕೆಂದು ಆಗ್ರಹಿಸಿದರು.

ಸಂಗೊಳ್ಳಿ ರಾಯಣ್ಣನ ಶೌರ್ಯ, ಪ್ರಾಮಾಣಿಕತೆ ಹಾಗೂ ನಿಷ್ಠೆ ಇಂದಿನ ಯುವಕರಿಗೆ ಮಾದರಿಯಾಗಿದ್ದು ಇವರನ್ನು ಒಂದೇ ಜಾತಿಗೆ ಸೀಮಿತ ಗೊಳಿಸುತ್ತಿರುವುದು ವಿಷಾದನಿಯ ಎಂದ ಅರುಣ್ ಕಲ್ಲಹಟ್ಟಿ ರಾಜ್ಯದ ಎಲ್ಲಾ ಶಾಲಾ – ಕಾಲೇಜು ಸೇರಿದಂತೆ ಸರ್ಕಾರಿ ಕಚೇರಿಗಳಲ್ಲಿ ಸಂಗೊಳ್ಳಿ ರಾಯಣ್ಣನವರ ಭಾವಚಿತ್ರ ಅಳವಡಿಸಿ ಅ ಅವರ ಜೀವನ ಮತ್ತು ಹೋರಾಟದ ಕುರಿತು ಪರಿಚಯಿಸಿ ಅವರಿಗೆ ಗೌರವ ಸಲ್ಲಿಸುವಂತಾಗ ಬೇಕು ಎಂದರು
ಇದೇ ಸಂದರ್ಭದಲ್ಲಿ ಪಟಾಕಿ ಸಿಡಿಸಿ ಸಂಗೊಳ್ಳಿ ರಾಯಣ್ಣ ಭಾವಚಿತ್ರಕ್ಕೆ ಪುಷ್ವ ಅರ್ಚನೆ ಮಾಡಿ ಸ್ವಾತಂತ್ರ್ಯ ಹೋರಾಟಗಾರರಿಗೆ ಜೈಕಾರ ಕೂಗಿ ಚಿಕ್ಕಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಮತ್ತು ಎರಡು ಊರಿನ ಗ್ರಾಮಸ್ಥರಿಗೆ ಸಿಹಿ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ದೊಡ್ಡಕೊಪ್ಪಲು ಡೈರಿ ಅಧ್ಯಕ್ಷ ನಾಗರಾಜ್, ಸಂಗೊಳ್ಳಿ ಯುವವೇದಿಯ ವಾಟರ್ ಮ್ಯಾನ್ ಚೆಲುವರಾಜ್, ನಿತಿನ್, ವಿಜಯ್ ಕಾಡು, ಕಾರ್ತಿಕ್ ಕಲ್ಲಟ್ಟಿ, ಅಭಿ, ಗಾಂಧಿಕಲ್ಲಹಟ್ಟಿ,ಮಣಿ. ಅರುಣ್, ಅಶೋಕ, ಲೋಕೇಶ್, ಸಂದೀಪ, ಕಾರಂತ , ಗಣೇಶ, ಗುಂಡ, ಗಗನ್ ಮಹದೇವ್, .ಪವನ್, ದಿಲೀಪ್, ಭರತ್, ದರ್ಶನ, ಶಶಿಧರ್ ದೇವರಾಜ್ಅರಸಣ್ಣ, ಶ್ರೀವಾಸ, ಉಮೇಶ, ರಿಯಾಜ್, ವೀರು, ಸಂಜಯ್‌, ರಂಗ, ಚಿರಂತ್ .ಕಿರಣ್, ತಮ್ಮಣ್ಣ, ರಮೇಶ್, ಸೇರಿದಂತೆ ಮತ್ತಿತರರು ಹಾಜರಿದ್ದರು.

ಕುಪ್ಪೆ ಗ್ರಾ.ಪಂ.ನಲ್ಲಿ ಸ್ವಾತಂತ್ರ್ಯ ದಿನಾಚರಣೆ” : ಸಾಲಿಗ್ರಾಮ ತಾಲೂಕಿನ‌ ಕುಪ್ಪೆ ಗ್ರಾ.ಪಂ.ನಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿಉ ಅಧ್ಯಕ್ಷೆ ಹೆಚ್ ಬಿ ಶಾರದಮ್ಮ, ಉಪಾಧ್ಯಕ್ಷೆ ಗೀತಾ ಕಾಂತರಾಜು,ಸದಸ್ಯರಾದ ಗೋವಿಂದೇಗೌಡ,ಗಣೇಶ, ಸಿ.ಬಿ.ಧರ್ಮ , ಮಹೇಂದ್ರ,ರೇಖಾ, ಮಾಜಿ ಅಧ್ಯಕ್ಷರಾದ ಮಂಜುನಾಥ , ವಿ.ಎಸ್.ಎಸ್.ಎನ್ ಮಾಜಿ ಅಧ್ಯಕ್ಷರಾದ ಸೋಮಪ್ಪ,ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷರಾದ ಸದಾಶಿವ ಕೀರ್ತಿ, ಹಿರಯಣ್ಣಯ್ಯ ಮಾಸ್ಟರ್, ಕೃಷ್ಣಯ್ಯ,ತುಳಸಿ, ಪಿ.ಡಿ.ಓ. ಯೋಗಾನಂದ, ನಾಗರಾಜು, ಡಿ.ಬಿ.ಮಹದೇವಪ್ಪ, ಸಿ.ಅರ್.ಚೆಲುವರಾಜ್, ಜಯಣ್ಣ ಹಾಜರಿದ್ದರು

RELATED ARTICLES
- Advertisment -
Google search engine

Most Popular