Friday, April 18, 2025
Google search engine

Homeರಾಜ್ಯಒಬ್ಬನೇ ವಿದ್ಯಾರ್ಥಿ‌ ಇದ್ದರು ಸರ್ಕಾರಿ ಶಾಲೆ ಮುಚ್ಚಬಾರದು: ನಾಡೋಜ ಗೊ ರು ಚನ್ನಬಸಪ್ಪ

ಒಬ್ಬನೇ ವಿದ್ಯಾರ್ಥಿ‌ ಇದ್ದರು ಸರ್ಕಾರಿ ಶಾಲೆ ಮುಚ್ಚಬಾರದು: ನಾಡೋಜ ಗೊ ರು ಚನ್ನಬಸಪ್ಪ

ಮಂಡ್ಯ: ಒಂದನೆಯ ತರಗತಿಯಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮವೇ ಕಡ್ಡಾಯವಾಗಬೇಕು. ಯಾವ ಕಾರಣಕ್ಕೂ ಬೇರೆ ಭಾಷೆಯನ್ನೂ ಶಿಕ್ಷಣ ಮಾಧ್ಯಮವಾಗಿ ಹೇರಬಾರದು. ಶಿಕ್ಷಣ ಮಾಧ್ಯಮ ಕನ್ನಡ ಮಾಧ್ಯಮದಲ್ಲೇ ಆಗಬೇಕು. ಎಲ್ಲರಿಗೂ ಶಿಕ್ಷಣ ನೀಡುವುದನ್ನು ಸರ್ಕಾರ ಕರ್ತವ್ಯವಾಗಿ ಪರಿಗಣಿಸಬೇಕು. ಒಬ್ಬನೇ ವಿದ್ಯಾರ್ಥಿ‌ ಇದ್ದರು ಸರ್ಕಾರಿ ಶಾಲೆ ಮುಚ್ಚಬಾರದು ಎಂದು ನಾಡೋಜ ಗೊ ರು ಚನ್ನಬಸಪ್ಪ ಹೇಳಿದರು.

87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಂದು ಅದ್ದೂರಿಯಾಗಿ ಚಾಲನೆ ದೊರಯಿತು. ನಾಡೋಜ ಗೊ ರು ಚನ್ನಬಸಪ್ಪ ಅಧ್ಯಕ್ಷತೆವಹಿಸಿದರು.

ಬಳಿಕ ಮಾತನಾಡಿದ ಗೊ ರು ಚನ್ನಬಸಪ್ಪ, ಮಂಡ್ಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಸಾಕಷ್ಟು ಖುಷಿಯ ವಿಚಾರ.ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಗೊ.ರು ಚನ್ನಬಸಪ್ಪ ಅವರು, ಕಸಾಪ ಕನ್ನಡ ಪ್ರಾತಿನಿಧಿಕ ಸಂಸ್ಥೆಯಾಗಿದೆ. ಮಂಡ್ಯ ಸಾಕಷ್ಟು ಹೆಸರು ಮಾಡಿರುವ ಜಿಲ್ಲೆ. ರಾಜಕೀಯಕ್ಕೆ ಹೆಚ್ಚು ಕೊಡುಗೆ ಕೊಟ್ಟಿದೆ. ಮಂಡ್ಯದಲ್ಲಿ ಹೆಚ್ಚು ಕನ್ನಡ ಮಾತನಾಡುತ್ತಾರೆ. ನನಗೆ ಗೌರವಾಧ್ಯಕ್ಷ ಮಾಡಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದ್ದಾರೆ.

1994ರಲ್ಲಿ ನಾನು ಕಸಾಪ ಅಧ್ಯಕ್ಷನಾಗಿದ್ದೆ. ಆಗ ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನ ನಡೆದಿತ್ತು. ಸಿಕ್ಕಿರುವ ಅವಕಾಶ ಅನಿರೀಕ್ಷಿತ. ನನಗೆ ಅಧ್ಯಕ್ಷರಾಗಬೇಕು ಎಂದಾಗ ಬೆರಗಾದೆ. ಪರಿಷತ್ ಕನ್ನಡಿಗರ ಸಾರ್ವಭೌಮ ಸಂಸ್ಥೆ. ನನಗೆ ಧ್ವಜ ಹಸ್ತಾಂತರ ಮಾಡಿರುವುದು ರಾಜಕೀಯ ಅಲ್ಲ. ಇದಕ್ಕೆ ಒಂದು ಘನತೆ ಇದೆ. ಶಿಕ್ಷಣ, ತಂತ್ರಜ್ಞಾನ, ಹಿಂದಿ ಏರಿಕೆ, ಗಣಿಗ ಕಲಿಕಾ ಕೇಂದ್ರಗಳು, ಪರಿಸರ ಸಂರಕ್ಷಣೆ ಇವುಗಳ ಬಗ್ಗೆ ಚರ್ಚೆ ಮಾಡಬೇಕು. ನಮ್ಮ ಭಾಷೆ ಸಮೃದ್ಧವಾಗಿ ಬೆಳೆಯಬೇಕು ಎಂದಿದ್ದಾರೆ.

RELATED ARTICLES
- Advertisment -
Google search engine

Most Popular