ಮೈಸೂರು , ಆ.೫ : ವಿಶೇಷ ಮಕ್ಕಳು ದೇವರಿಗೆ ಸಮಾನರಾಗಿದ್ದು, ಸರ್ಕಾರ ವಿಶೇಷ ಮಕ್ಕಳ ಶಾಲೆಗಳನ್ನು ಗುರುತಿಸಿ ಹೆಚ್ಚು ಅನುದಾನ ನೀಡುವ ಮೂಲಕ ಪ್ರೋತ್ಸಾಹ ನೀಡಬೇಕೆಂದು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಸರ್ಕಾರವನ್ನು ಒತ್ತಾಯಿಸಿದರು.
ಶ್ರೀರಾಂಪುರದ ಕಂದಾಯ ಬಡಾವಣೆಯಲ್ಲಿರುವ ಶ್ರೀನವಚೇತನ ಬಸವೇಶ್ವರ ಟ್ರಸ್ಟ್ನ ವಿಶೇಷ ಚೇತನರ ಶಾಲೆಗೆ ಭೇಟಿ ನಿಡಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಈ ಶಾಲೆಗೆ ಡಿ. ಸಾಲುಂಡಿ, ದೊಡ್ಡಹುಂಡಿ, ಉದ್ಬೂರು, ಮುರುಡಗಳ್ಳಿ, ದೂರ, ಧನಗಳ್ಳಿಗಳಿಂದ ವಿಶೇಷ ಮಕ್ಕಳನ್ನು ಕರೆದುಕೊಂಡು ಬಂದು ಮರೀಗೌಡರು ಆರೈಕೆ ಮಾಡುತ್ತಿರುವುದನ್ನು ನೋಡಿದರೆ ಕರುಳು ಕಿತ್ತು ಬರುತ್ತದೆ.
ವಿಶೇಷ ಚೇತನ ಮಕ್ಕಳ ನಡವಳಿಕೆ, ಸ್ವಾಭಾವಿಕವಾಗಿ ಇರುವುದಿಲ್ಲ. ಚೆನ್ನಾಗಿರುವ ಮಕ್ಕಳನ್ನೇ ನೋಡಿಕೊಳ್ಳುವುದು ಕಷ್ಟ. ಈ ಮಕ್ಕಳು ಹೆತ್ತವರಿಗೆ ಭಾರ ಅನಿಸುತ್ತದೆ. ಆದರೆ ಮರೀಗೌಡರು ಈ ಕೆಲಸವನ್ನು ಭಾಗ್ಯ ಎಂದುಕೊAಡು ಸೇವೆ ಮಾಡುತ್ತಿದ್ದಾರೆ. ಇಂತಹ ಮಕ್ಕಳ ಸಂತತಿ ಹೆಚ್ಚಾಗದಿರಲಿ ಎಂದ ಅವರು, ಈ ವಿಶೇಷ ಮಕ್ಕಳ ಶಾಲೆಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಹಾಗೂ ಸಂಬoಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಕೊಡಿಸಲು ಪ್ರಯತ್ನಿಸುತ್ತೇನೆ. ನನ್ನ ವಿಧಾನ ಪರಿಷತ್ ಸದಸ್ಯರ ಅನುದಾನದಲ್ಲಿ ಪ್ರತಿವರ್ಷ ೧ ಲಕ್ಷ ರೂ. ಅನ್ನು ಸಂಸ್ಥೆಗೆ ನೀಡುವುದರ ಜೊತೆಗೆ ಈ ಸಂಸ್ಥೆಗೆ ಮೂಡಾದಿಂದ ಸಿ.ಎ. ನಿವೇಶನ ಕೊಡಿಸುವುದರ ಜೊತೆಗೆ ನಿವೇಶನದ ಸಂಪೂರ್ಣ ಹಣವನ್ನು ತಾವೇ ಭರಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಮಾಕಿ ಮರೀಗೌಡ, ದಿನೇಶ್‌ಗೌಡ, ಧನಗಳ್ಳಿ ಬಸವರಾಜು, ರಮೇಶ್, ಶಿಕ್ಷಕರಾದ ಸನ್ಮತಿ, ಅಶ್ವಿನಿ, ತೇಜಸ್ವಿನಿ, ಮಂಜುಳ, ಬಸಪ್ಪ ಹಾಜರಿದ್ದರು.