Friday, April 18, 2025
Google search engine

Homeಸ್ಥಳೀಯಶ್ರೀ ಯೋಗಾ ನರಸಿಂಹಸ್ವಾಮಿ ದೇವಾಲಯಕ್ಕೆ ರಾಜ್ಯಪಾಲ ವಿಜಯ್‌ಶಂಕರ್ ಭೇಟಿ

ಶ್ರೀ ಯೋಗಾ ನರಸಿಂಹಸ್ವಾಮಿ ದೇವಾಲಯಕ್ಕೆ ರಾಜ್ಯಪಾಲ ವಿಜಯ್‌ಶಂಕರ್ ಭೇಟಿ

ಮೈಸೂರು : ಮೈಸೂರಿನ ವಿಜಯನಗರದ ಶ್ರೀ ಯೋಗ ನರಸಿಂಹಸ್ವಾಮಿ ದೇಗುಲಕ್ಕೆ ಮೇಘಾಲಯ ರಾಜ್ಯದ ರಾಜ್ಯಪಾಲರಾದ ಸಿ.ಹೆಚ್. ವಿಜಯ್ ಶಂಕರ್ ಅವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ದೇಗುಲಕ್ಕೆ ಆಗಮಿಸಿದ ಮೇಘಾಲಯ ರಾಜ್ಯಪಾಲ ಸಿ.ಹೆಚ್. ವಿಜಯ್ ಶಂಕರ್ ಅವರಿಗೆ ದೇಗುಲದ ಟ್ರಸ್ಟ್ ವತಿಯಿಂದ ಶ್ರೀ ಬಾಷ್ಯಂ ಸ್ವಾಮಿಜಿ ನೇತೃತ್ವದಲ್ಲಿ ಪೂರ್ಣಕುಂಭ ಸ್ವಾಗತ ನೀಡಿ ಸ್ವಾಗತಿಸಲಾಯಿತು.
ಬಳಿಕ ಶ್ರೀ ಯೋಗ ನರಸಿಂಹ ಸ್ವಾಮಿಗೆ ವಿಜಯಶಂಕರ್ ಅವರು ವಿಶೇಷ ಪೂಜೆ ಸಲ್ಲಿಸಿ ದಸರಾ ಪೂಜಾ ಕೈಂಕರ್ಯದ ಭಾಗವಾದ ಸುದರ್ಶನ ಹೋಮದ ಸಂಕಲ್ಪ ಪೂಜೆಗೆ ದೇಗುಲದ ಆವರಣದಲ್ಲಿ ಬೃಹತ್ ಅಗರಬತ್ತಿಗೆ ಜ್ಯೋತಿ ಹೊತ್ತಿಸುವ ಮೂಲಕ ಚಾಲನೆ ನೀಡಿದರು.

ದಸರಾ ವೇಳೆಯಲ್ಲಿ ನೆಡೆಯುವ ದ್ವಾದಶ ದಿನಗಳ ಈ ಪೂಜಾ ಕೈಂಕರ್ಯದಲ್ಲಿ ಇದೆ ಶನಿವಾರ ಸುದರ್ಶನ ಹೋಮ ಜರುಗಲಿದ್ದು ವಿಜಯದಶಮಿ ದಿನ ಮಹಾ ಅಭಿಷೇಕ ಪೂಜೆ ನೆಡೆಯಲಿದೆ. ದೇಗುಲದ ಶುದ್ದಿ ನೆಡೆಸಲಾಗುವುದು ಎಂದು ದೇಗುಲದ ಆಡಳಿತಾಧಿಕಾರಿ ಎನ್. ಶ್ರೀನಿವಾಸನ್ ಅವರು ಮಾಹಿತಿ ನೀಡಿದರು.

RELATED ARTICLES
- Advertisment -
Google search engine

Most Popular