ಮೈಸೂರು: ಸರ್ಕಾರ ನಶಿಸಿ ಹೋಗುತ್ತಿರುವ ರಂಗಭೂಮಿ ಕಲೆಯನ್ನು ಬೆಳೆಸುವುದರೊಂದಿಗೆ ಕಲಾವಿದರು ಹಾಗೂ ತಂತ್ರಜ್ಞರಿಗೆ ಪ್ರೋತ್ಸಾಹ ನೀಡಬೇಕು ಎಂದು ಉದ್ಯಮಿ ಡಾ. ಕೆ.ಎಸ್.ಕರೀಗೌಡ ಒತ್ತಾಯಿಸಿದರು.
ಮೈಸೂರು ತಾಲ್ಲೂಕು ಹಳೆಕಾಮನ ಕೊಪ್ಪಲಿನಲ್ಲಿ ಶ್ರೀ ಭಕ್ತ ಕನಕದಾಸ ನಾಟಕ ಮಂಡಳಿ ವತಿಯಿಂದ ನಡೆದ ಶನಿಪ್ರಭಾವ ಅಥವಾ ರಾಜ ಸತ್ಯ ವ್ರತ ಎಂಬ ಪೌರಾಣಿಕ ನಾಟಕದ ಅಧ್ಯಕ್ಷತೆಯನ್ನು ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಹಿಂದಿನ ಕಾಲದಲ್ಲಿ ನಾಟಕಗಳನ್ನು ನೋಡಲು ಎಲ್ಲಾ ಊರುಗಳಿಂದ ಜನರು ಬರುತ್ತಿದ್ದರು. ಇತ್ತೀಚೆಗೆ ಟಿ.ವಿ. ಮೊಬೈಲ್ ಬಂದ ಮೇಲೆ ನಾಟಕ ನೋಡುವವರು ಕಡಿಮೆ ಆಗಿದ್ದಾರೆ. ಆಡುವವರು ಕಡಿಮೆಯಾಗಿದ್ದಾರೆ. ಈಗ ಮನೆಯಲ್ಲಿ ಧಾರವಾಹಿ ನೋಡುವವರು ಹೆಚ್ಚಾಗಿದ್ದಾರೆ. ಕಲೆಯನ್ನೇ ನಂಬಿರುವ ಕಲಾವಿದರು ಕೆಲಸವಿಲ್ಲದೆ ಜೀವನ ನಿರ್ವಹಣೆ ಮಾಡುವುದೇ ಕಷ್ಟವಾಗಿದೆ. ಆದ್ದರಿಂದ ರಂಗಭೂಮಿ ಕಲಾವಿದರಿಗೆ ಸರ್ಕಾರ ಮನೆ, ನಿವೇಶನ, ಮಾಶಾಸನ ಕೊಡುವ ಮುಖಾಂತರ ಅವರನ್ನು ಪ್ರೋತ್ಸಾಹಿಸಬೇಕು ಎಂದರು.
ಸಮಾರಂಭದಲ್ಲಿ ಕಾಂಗ್ರೆಸ್ ಮುಖಂಡರಾದ ಜಿ.ಪಂ. ಮಾಜಿ ಸದಸ್ಯ ಅರುಣ್‌ಕುಮಾರ್, ಸೆಂಟ್ರಿಂಗ್ ರವಿಕುಮಾರ್, ವೈ.ಸಿ. ಸ್ವಾಮಿ, ಮೆಹಬೂಬ್ ಪಾಷಾ, ಶಿವಲಿಂಗೇಗೌಡ, ಕರಕನಹಳ್ಳಿ ಮಂಜು, ನಂಜುಂಡಸ್ವಾಮಿ, ಗಾಂಧಿಕುಮಾರ್, ದಳಪತಿ ಮಹಾದೇವ್, ರಮೇಶ್, ಜಯರಾಂ, ನಾಗರಾಜು, ಮಹಾದೇವ್ ಗುಡ್ಡಪ್ಪ, ಸಿದ್ದರಾಜು, ಶಿವಣ್ಣ, ಬೋರೇಗೌಡ ಹಾಗೂ ಗ್ರಾಮಸ್ಥರು ಹಾಜರಿದ್ದರು.