Sunday, April 20, 2025
Google search engine

Homeರಾಜಕೀಯಕಾವೇರಿ ಹೋರಾಟದಲ್ಲಿ ಸರ್ಕಾರ ಡಿಫೆನ್ಸ್ ಮಾಡೋದಲ್ಲ, ಅಫೆನ್ಸಿವ್ ಆಗಿಯೂ ಇರಬೇಕು: ಬಸವರಾಜ ಬೊಮ್ಮಾಯಿ

ಕಾವೇರಿ ಹೋರಾಟದಲ್ಲಿ ಸರ್ಕಾರ ಡಿಫೆನ್ಸ್ ಮಾಡೋದಲ್ಲ, ಅಫೆನ್ಸಿವ್ ಆಗಿಯೂ ಇರಬೇಕು: ಬಸವರಾಜ ಬೊಮ್ಮಾಯಿ

ಮಂಡ್ಯ: ಕಾವೇರಿ ಹೋರಾಟದಲ್ಲಿ ಕರ್ನಾಟಕ ಸರ್ಕಾರ ಕೇವಲ ಡಿಫೆನ್ಸ್ ಮಾಡೋದಲ್ಲ, ಅಫೆನ್ಸಿವ್ ಆಗಿಯೂ ಇರಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಮಂಡ್ಯದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಂಡ್ಯ ಜನರ ಹೋರಾಟದ ಜೊತೆಗೆ ನಾವೆಲ್ಲರೂ ಇದ್ದೇವೆ. ಕಾವೇರಿ ವಿವಾದ ಯಾಕೆ ಪದೇ ಪದೇ ಹುಟ್ಟುತ್ತಿದೆ. ವಿವಾದಕ್ಕೆ ಶಾಶ್ವತ ಪರಿಹಾರ ಯಾವಾಗ ಎಂದು ಪ್ರಶ್ನಿಸಿದರು.

ಕಾವೇರಿ ಕರ್ನಾಟಕದಲ್ಲಿ ಹುಟ್ಟುತ್ತದೆ. ನಮ್ಮ ರಾಜ್ಯದಲ್ಲೇ ಅತೀ ಹೆಚ್ಚು ನೀರು ಶೇಖರಣೆಯಾಗುತ್ತದೆ. ಆದರೆ ನೀರು ತಮಿಳುನಾಡಿಗೆ ಹರಿದುಹೋಗ್ತಿದೆ. ನವೆಂಬರ್‌ ವರೆಗೂ ತಮಿಳುನಾಡಿಗೆ ಮಳೆ ಇದೆ. ಕರ್ನಾಟಕಕ್ಕೆ ಮಳೆ ತುಂಬಾ ಕಡಿಮೆ. ಕಾವೇರಿ ಜಲಾನಯನದಲ್ಲಿ  ನಾಲ್ಕು ಜಲಾಶಯಗಳಿವೆ. ಆದರೆ ತಮಿಳುನಾಡಿನ ಕಾವೇರಿ ಕೊಳ್ಳದಲ್ಲಿ ಡ್ಯಾಂ ಕಟ್ಟಿಲ್ಲ. ಸಂಕಷ್ಟಕ್ಕೆ ಅವರು ನೀರು ಶೇಖರಣೆ ಮಾಡಿಕೊಳ್ಳಲ್ಲ ಎಂದರು.

ಕಾವೇರಿ ವಿಚಾರದಲ್ಲಿ ಎರಡು ರಾಜ್ಯಗಳ ನಡುವೆ ಆದ ಒಪ್ಪಂದ ಈಗ ಮಾರಕವಾಗಿದೆ.  ಸ್ವತಂತ್ರ ನಂತರ ಎಲ್ಲ ಒಪ್ಪಂದಗಳು ರದ್ದಾದವು. ಆದರೆ ಈ ಒಪ್ಪಂದ ಮಾತ್ರ ಹಾಗೇ ಉಳಿಯಿತು. ಪ್ರಾಧಿಕಾರವೂ ಹಳೇಯ ಒಪ್ಪಂದದ ಮೂಲ ಉದ್ದೇಶವನ್ನೇ ಎತ್ತಿಹಿಡಿದಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.

ನೀರಿನ ಹಂಚಿಕೆಯಲ್ಲಿ ನಮಗೆ ಕಡಿಮೆ ನೀರು, ಅವರಿಗೆ ಹೆಚ್ಚು. ಇದರಲ್ಲಿ ರಾಜ್ಯ ಸರ್ಕಾರ ಬೇಜವಬ್ದಾರಿ ಸಾಕಷ್ಟಿದೆ. CWRC, CWMA ಅಧಿಕಾರಿಗಳು ನಿಯಮಗಳನ್ನು ಓದಬೇಕು. ತಮಿಳುನಾಡಿನ ಎಷ್ಟು ಬೆಳೆ ಬೆಳೆಯಬೇಕು, ಎಷ್ಟು ನೀರು ಬಳಸಬೇಕು ಎಂಬ ನಿಯಮವಿದೆ‌. ಆದರೆ ಜಲಾಶಯದ ನೀರಿನ ಮಟ್ಟ ನೋಡಿ ಆದೇಶ ಮಾಡ್ತಾರೆ ಎಂದು ಕಿಡಿಕಾರಿದರು.

ನಮ್ಮ ನೀರು ನಮ್ಮ ಹಕ್ಕು ಎಂದವರು ನೀರು ಉಳಿಸಿಕೊಳ್ಳಲಿಲ್ಲ. ತಮಿಳುನಾಡು ಅಕ್ರಮವಾಗಿ ಹೆಚ್ಚು ನೀರು ಬಳಸಿದ್ದಾರೆ. ಅಕ್ರಮ ನೀರಾವರಿಗೆ ಅಕ್ರಮ ನೀರು ಬಳಕೆ ಮಾಡಿದೆ ತಮಿಳುನಾಡು. ಹೆಚ್ಚು ಪ್ರದೇಶದಲ್ಲಿ ತಮಿಳುನಾಡು ಬೆಳೆ ಬೆಳೆಯುತ್ತದೆ. ಈ ವಿಚಾರದ ಬಗ್ಗೆ ರಾಜ್ಯ ಸರ್ಕಾರ ಯಾಕೆ ಹೇಳ್ತಿಲ್ಲ. ಇವರು ಹೇಳೋವರೆಗೂ ಅವರ ಪರ ಆದೇಶ ಆಗ್ತಾನೆ ಇರುತ್ತದೆ ಎಂದರು.

RELATED ARTICLES
- Advertisment -
Google search engine

Most Popular