Friday, April 11, 2025
Google search engine

Homeಸ್ಥಳೀಯಡಾ ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ ಜಿಪಂ ಸಿಇಓ ಭೇಟಿ ಮೂಲಭೂತ ಸೌಕರ್ಯಗಳ ಪರಿಶೀಲನೆ

ಡಾ ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ ಜಿಪಂ ಸಿಇಓ ಭೇಟಿ ಮೂಲಭೂತ ಸೌಕರ್ಯಗಳ ಪರಿಶೀಲನೆ

ಮೈಸೂರು: ನಗರದ  ಗಾಂಧಿನಗರದಲ್ಲಿರುವ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ,ಜಿಲ್ಲಾ ಪಂಚಾಯತ್ ಮಾನ್ಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಕೆ ಎಮ್ ಗಾಯತ್ರಿ ರವರು ಭೇಟಿ ನೀಡಿ ಸುಮಾರು ಒಂದುವರೆ ಗಂಟೆಗೂ ಹೆಚ್ಚು ಕಾಲ ಮಕ್ಕಳೊಡನೆ ಬೆರೆತು ಮಾತನಾಡಿ ಅಲ್ಲಿನ ಮೂಲಭೂತ ಸೌಕರ್ಯ ಪರಿಶೀಲಿಸಿದರು.

ಬಾಡಿಗೆ ಕಟ್ಟಡದಲ್ಲಿ ಸ್ಥಳಾವಕಾಶದ ಕೊರತೆ ಇರುವುದನ್ನು ಗಮನಿಸಿ ಯಾವುದಾದರೂ ದೊಡ್ಡ ಕಟ್ಟಡಕ್ಕೆ ಸ್ಥಳಾಂತರ ಮಾಡುವಂತೆ ಹಾಗೂ ನಗರದ ಹೊರವಲಯದ ಮಂಡಕಳ್ಳಿ ಬಳಿ ದೊರೆತಿರುವ ನಿವೇಶನದಲ್ಲಿ ಕಟ್ಟಡ ನಿರ್ಮಾಣ ಮಾಡುವ ಸಂಬಂಧ ಅನುದಾನ ಬಿಡುಗಡೆಗೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ತಯಾರಿ ಮಾಡುವಂತೆ ಸ್ಥಳದಲ್ಲಿ ಹಾಜರಿದ್ದ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ರಂಗೇಗೌಡರವರಿಗೆ ಸೂಚಿಸಿದರು..

ಪರಿಶಿಷ್ಟ ಜಾತಿ ಅಲೆಮಾರಿ ಜನಾಂಗಕ್ಕೆ ಸೇರಿದ ತಂದೆ ತಾಯಿಗಳ ಮಕ್ಕಳೇ ಅತಿ ಹೆಚ್ಚು ಇರುವ ವಸತಿ ಶಾಲೆಗೆ ಹೆಚ್ಚಿನ ಮೂಲಭೂತ ಸೌಕರ್ಯ ಬೇಕಾಗಿದೆ ಎಂಬುದನ್ನು ಮನಗಂಡು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು…

ಸುಮಾರು ಒಂದುವರೆ ಗಂಟೆಗೂ ಹೆಚ್ಚು ಕಾಲ ಮಕ್ಕಳ ಕುಟುಂಬದ ಪೂರ್ವಪರ ವಿಚಾರಿಸಿ ಮಕ್ಕಳಿಗೆ ಬುದ್ಧಿ ಮಾತು ಹೇಳಿ ಅವರಿಗೆ ಸಿಹಿ ತಿಂಡಿ ನೀಡಿದರು.

ಇಲ್ಲಿನ ಮಕ್ಕಳ ತಂದೆತಾಯಿಗಳು, ಮಕ್ಕಳನ್ನು ಶಿಕ್ಷಣ ಪಡೆಯುವ ಉದ್ದೇಶದಿಂದ ಶಾಲೆಯಲ್ಲಿ ಬಿಟ್ಟು  ಬೇರೆ ಬೇರೆ ನಗರಗಳು ಹಳ್ಳಿಗಳಿಗೆ  ಕೂಲಿಕೆಲಸ, ವ್ಯಾಪಾರ ವ್ಯವಹಾರ ಮಾಡಲು ಹೊರಗಡೆ ಹೋಗಿರುತ್ತಾರೆ.ಆದ್ದರಿಂದ ಇಂತಹ ಮಕ್ಕಳ ಯೋಗ ಕ್ಷೇಮ ಸರಿಯಾಗಿ ನೋಡಿಕೊಳ್ಳಬೇಕು ಎಂದು ವಾರ್ಡನ್ ರವರಿಗೆ ಸೂಚಿಸಿದರು…

ಇಂತಹ ಶಾಲೆಗಳ ಅವಶ್ಯಕತೆ ಇರುವುದನ್ನು ಮನಗಂಡು ಮತ್ತೊಂದು ಶಾಲೆಯ ಪ್ರಾರಂಭ ಮಾಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದರು ಹಾಗೂ ಈ ಶಾಲೆಗೆ ಅಗತ್ಯವಾಗಿ ಬೇಕಾಗಿರುವ ಹೆಚ್ಚುವರಿ ವಸ್ತುಗಳನ್ನು ಪಟ್ಟಿ ಮಾಡಿ ಕೊಡಲು ಸೂಚಿಸಿದರು.. ಇಲ್ಲಿನ ಮಕ್ಕಳಿಗೆ ಹೆಚ್ಚುವರಿ ಬೋಧನೆ ಮಾಡುವ ಉದ್ದೇಶದಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಇರುವ ಸಂಗೀತ ಶಿಕ್ಷಕರು, ಇಂಗ್ಲಿಷ್,ಕಲೆ,ವಿಜ್ಞಾನ ಶಿಕ್ಷಕರನ್ನು ನಿಯೋಜನೆ ಮಾಡಿಕೊಂಡು ವಾರದಲ್ಲಿ ಒಂದೆರಡು ದಿನ ಬೋಧನೆ ಮಾಡಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

RELATED ARTICLES
- Advertisment -
Google search engine

Most Popular