Friday, April 11, 2025
Google search engine

Homeಸ್ಥಳೀಯಮರಿಮಲ್ಲಪ್ಪ ಕಿಂಡರ್ ಗಾರ್ಟನ್ ಶಾಲೆಯಲ್ಲಿ ಗ್ರಾಜುಯೇಷನ್ ಡೇ ಆಚರಣೆ

ಮರಿಮಲ್ಲಪ್ಪ ಕಿಂಡರ್ ಗಾರ್ಟನ್ ಶಾಲೆಯಲ್ಲಿ ಗ್ರಾಜುಯೇಷನ್ ಡೇ ಆಚರಣೆ

ಮೈಸೂರು:ಮರಿಮಲ್ಲಪ್ಪ ಕಿಂಡರ್ ಗಾರ್ಟನ್ ಶಾಲೆಯಲ್ಲಿ ಗ್ರಾಜುಯೇಷನ್ ಡೇ ಯನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಸಂಸ್ಥೆಯ ಮುಖ್ಯಸ್ಥರಾದ ಶ್ರೀಯುತ ಸುಚೇತನ್ ರವರು ಸಂಸ್ಥೆಯ ಎಜುಕೇಶನ್ ಡೆವಲಪಮೆಂಟ್ ಆಫೀಸರ್ ಆದ ಶ್ರೀಮತಿ ಮಂಗಳ ಮುದ್ದುಮಾದಪ್ಪರವರು ಮರಿಮಲ್ಲಪ್ಪಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ಜೆನ್ನಿಫರ್ ರಾಜ್ ,ಮರಿಮಲ್ಲಪ್ಪ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾರಾದ ಶ್ರೀ ಶಂಭುಲಿಂಗಪ್ಪ ಮತ್ತು ಮರಿಮಲ್ಲಪ್ಪ ಕಿಂಡರ್ ಗಾರ್ಟನ್ ಶಾಲೆಯ ಮುಖ್ಯೋಪಾಧ್ಯಾಯಿನಿಯವರಾದ ಶ್ರೀಮತಿ ಅನ್ನಪೂರ್ಣರವರು ಭಾಗವಹಿಸಿದರು .

ವಿದ್ಯಾರ್ಥಿಗಳು ಶೈಕ್ಷಣಿಕ ನಿಲುವಂಗಿಯೊಂದಿಗೆ ಕಾರ್ನರ್ ಕ್ಯಾಪ್ ಧರಿಸಿದ್ದರು. ಪುಟ್ಟ ಮಕ್ಕಳು ಅತಿಥಿಗಳನ್ನು ಗುಲಾಬಿ ಹೂವನ್ನು ಕೊಟ್ಟು ನಗು ಮುಖದಿಂದ ಸ್ವಾಗತಿಸಿದರು . ವಿದ್ಯಾರ್ಥಿಗಳು ಪ್ರಾರ್ಥನೆ ಮಾಡಿ, ಹೂಗುಚ್ಛ ನೀಡುವುದರ ಮುಖಾಂತರ ಸ್ವಾಗತ ಭಾಷಣ ಮಾಡಿದರು. ಅತಿಥಿಗಳು ವಿದ್ಯಾರ್ಥಿಗಳೊಂದಿಗೆ ದೀಪ ಬೆಳಗುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು .

ಪುಟ್ಟ ಮಕ್ಕಳು ಶ್ಲೋಕ , ಪ್ರತಿಜ್ಞೆ ,ಭಾಷಣ ಮತ್ತು ನೃತ್ಯ ಮಾಡಿ ಎಲ್ಲರನ್ನು ಮನರಂಜಿಸಿದರು. ನಂತರ ಅತಿಥಿಗಳು ಮಕ್ಕಳಿಗೆ ಪ್ರಮಾಣಪತ್ರ ಮತ್ತು ನೆನಪಿನ ಕಾಣಿಕೆ ನೀಡಿದರು. ನಂತರ ಅಥಿತಿಗಳು ವಿದ್ಯಾರ್ಥಿಗಳನ್ನು ಮತ್ತು ಪೋಷಕರನ್ನು ಕುರಿತು ಹಿತವಚನ ನೀಡಿದರು. ಮರಿಮಲ್ಲಪ್ಪ ಕಿಂಡರ್ ಗಾರ್ಟನ್ ಶಾಲೆಯಿಂದ ಆಯೋಜಿಸಿದ್ದ ಗ್ರಾಜುಯೇಷನ್ ಡೇ ಅತ್ಯಂತ ವಿಜೃಂಭಣೆಯಿಂದ ನಡೆಯಿತು.

RELATED ARTICLES
- Advertisment -
Google search engine

Most Popular