Friday, April 18, 2025
Google search engine

Homeಅಪರಾಧಬೆಂಗಳೂರಲ್ಲಿ 13 ಸಾವಿರ ಲಂಚ ಪಡೆಯುವಾಗ, ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಪಂ ಬಿಲ್ ಕಲೆಕ್ಟರ್

ಬೆಂಗಳೂರಲ್ಲಿ 13 ಸಾವಿರ ಲಂಚ ಪಡೆಯುವಾಗ, ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಪಂ ಬಿಲ್ ಕಲೆಕ್ಟರ್

ಬೆಂಗಳೂರು : ಖಾಲಿ ನಿವೇಶನ ಒಂದಕ್ಕೆ ಇ ಖಾತಾ ಮಾಡಿಸಿಕೊಡಲು ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಒಬ್ಬ ವ್ಯಕ್ತಿಯ ಬಳಿ 13,000 ಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದಾನೆ. 13,000 ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಬೆಂಗಳೂರಿನ ಯಲಹಂಕ ತಾಲೂಕಿನ ಹೆಸರುಗಟ್ಟ ಹೋಬಳಿಯ ಶಿವಕೋಟಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.

ಯಲಹಂಕ ತಾಲ್ಲೂಕಿನ ಹೆಸರಘಟ್ಟ ಹೋಬಳಿಯ ಶಿವಕೋಟೆ ಗ್ರಾಪಂ ಬಿಲ್ ಕಲೆಕ್ಟರ್ ಪ್ರದೀಪ್ ಅವರನ್ನು ಲೋಕಾಯುಕ್ತ ಪೊಲೀಸರು ಇದೀಗೇ ಅರೆಸ್ಟ್ ಮಾಡಿದ್ದಾರೆ. ಶಿವಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಕ್ಷಾ.ವಿ ರವರ ತಂದೆಯವರ ಹೆಸರಿನಲ್ಲಿ ಖಾಲಿ ನಿವೇಶನವಿದ್ದು, ನಿವೇಶನಕ್ಕೆ ಈ-ಖಾತಾ ಮತ್ತು ಮ್ಯೂಟೇಷನ್ ವರ್ಗಾವಣೆ ಮಾಡಿಕೊಡಲು ಅರ್ಜಿ ಸಲ್ಲಿಸಿದ್ದರು.

ಕೆಲಸವನ್ನು ಮಾಡಿಕೊಡಲು ಶಿವಕೋಟಿ ಗ್ರಾಮ ಪಂಚಾಯ್ತಿಯ ಬಿಲ್ ಕಲಕ್ಟರ್ ಆದ ಪ್ರದೀಪ್ ರವರು 13 ಸಾವಿರ ರೂಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದು, ಲಂಚದ ಹಣವನ್ನು ಕೊಡುವಾಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಹಣದ ಸಮೇತ ಬಿಲ್ ಕಲಕ್ಟರ್ ಪ್ರದೀಪ್ ರವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

RELATED ARTICLES
- Advertisment -
Google search engine

Most Popular