ವರದಿ:ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಪಟ್ಟಣದ ಗಾಂಧಿ ಪಾರ್ಕ್ನಲ್ಲಿರುವ ಶ್ರೀ ಕಾಳಿಕಾಂಭ ಕಮಠೇಶ್ವರಿ ದೇವಾಲಯದ ೨೦ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಆಚರಿಸಲಾಯಿತು.
ಇಲ್ಲಿನ ವಿಶ್ವಕರ್ಮ ಸೇವಾ ಸಮಾಜದ ವತಿಯಿಂದ ನಿರ್ಮಾಣ ಮಾಡಲಾಗಿರುವ ಕಮಠೇಶ್ವರಿ ದೇವಸ್ಥಾನದ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ ಬೆಳಗ್ಗೆ ೮ ಗಂಟೆಗೆ ಅಮ್ಮನವರಿಗೆ ವಿವಿಧ ಅಭಿಷೇಕ ಮತ್ತು ಅಲಂಕಾರ ಮಾಡಿದ ನಂತರ ಮಹಾಮಂಗಳಾರತಿ ಮಾಡಲಾಯಿತು. ಆನಂತರ ಹೋಮ ಹವನ ನಡೆಸಲಾಯಿತು.
ವಿಶ್ವ ಕರ್ಮ ಸೇವಾ ಸಮಾಜದ ಅಧ್ಯಕ್ಷರೂ ಆದ ಪುರಸಭೆಯ ಮಾಜಿ ಸದಸ್ಯ ಕೆ.ಎಸ್.ರೇವಣ್ಣರವರ ನೇತೃತ್ವದಲ್ಲಿ ಕಳೆದ ೨೦ ವರ್ಷಗಳಿಂದ ದೇವಾಲಯದ ವಾರ್ಷಿಕೋತ್ಸವ ನಡೆಸಿಕೊಂಡು ಬರುತ್ತಿದ್ದು, ಈ ಬಾರಿ ವಿಶೇಷ ಮತ್ತು ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಲಾಯಿತು. ಮಧ್ಯಾಹ್ನ ಬಂದAತಹ ಎಲ್ಲಾ ಭಕ್ತರಿಗೂ ಸಾಮೂಹಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡು ದೇವರಿಗೆ ಪೂಜೆ ಸಲ್ಲಿಸಿದ ನಂತರ ಮಾತನಾಡಿ ಈ ದೇವಾಲಯದ ಇನ್ನಷ್ಟು ಅಭಿವೃದ್ದಿಗೆ ಆರ್ಥಿಕ ಸಹಕಾರ ನೀಡುವುದರ ಜತೆಗೆ ವಿಶ್ವಕರ್ಮ ಸಮಾಜದವರ ಅಭಿವೃದ್ದಿಗಾಗಿ ಎಲ್ಲಾ ರೀತಿಯ ಸಹಾಯ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
ಈ ಸಂಧರ್ಭದಲ್ಲಿ ನವ ನಗರ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಪುರಸಭೆ ಮಾಜಿ ಸದಸ್ಯರಾದ ಕೆ.ಬಿ.ಸುಬ್ರಮಣ್ಯ, ಸೈಯದ್‌ಅಸ್ಲಾಂ, ಎಡತೊರೆ ಬಿಇಡಿ ಕಾಲೇಜಿನ ವ್ಯವಸ್ಥಾಪಕ ಲೋಕೇಶ್‌ಭರಣಿ, ವಿಶ್ವಕರ್ಮ ಸೇವಾ ಸಮಾಜದ ಅಧ್ಯಕ್ಷ ಕೆ.ಎಸ್.ರೇವಣ್ಣ, ಕಾರ್ಯದರ್ಶಿ ರೇಣುಕಪ್ರಸನ್ನ, ಉಪಾಧ್ಯಕ್ಷ ಎನ್.ರವೀಶ್, ಪದಾಧಿಕಾರಿಗಳಾದ ಪ್ರಸಾದ್, ಸಿ.ವಿ.ಮೋಹನ್‌ಕುಮಾರ್, ಸಿ.ಆರ್.ಗಣೇಶಾಚಾರ್, ಸಿದ್ದಪ್ಪಾಜಿ ದೇವಾಲಯ ಸಮಿತಿಯ ಪದಾಧಿಕಾರಿಗಳಾದ ದಿನೇಶ್, ಕೃಷ್ಣ, ಮುಖಂಡರಾದ ಯೋಗೀಶಾಚಾರ್, ಪುಟ್ಟಸ್ವಾಮಾಚಾರ್, ಲಕ್ಷಿö್ಮÃಶ್, ಸಿ.ಡಿ.ರಾಜಾಚಾರ್, ಪ್ರಕಾಶ್, ನಟಶೇಖರಾಚಾರ್, ಕೆ.ಎನ್.ತುಳಸೀಕುಮಾರ್ ಮುಂತಾದವರು ಹಾಜರಿದ್ದರು.