ದಾವಣಗೆರೆ : ಹಿಂದುಳಿದ ವರ್ಗಗಳ ಇಲಾಖೆಗಳಲ್ಲಿ ಯಾವುದೇ ರೀತಿಯಾಗಿ ಅನುದಾನ ಸ್ಥಗಿತವಾಗಿಲ್ಲ. ಅನುದಾನ ಬಿಡುಗಡೆ ಆಗದೆ ಇರಬಹುದು ಆದರೆ ಅನುದಾನ ಸ್ಥಗಿತವಾಗಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವ ಎಚ್ ಸಿ ಮಹದೇವಪ್ಪ ಸ್ಪಷ್ಟಪಡಿಸಿದರು.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ಸ್ಥಗಿತವಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ, ಬಜೆಟ್ ನಲ್ಲಿ ನಿಗದಿಯಾಗಿರುವ ಅನುದಾನ ಮಂಜೂರಾತಿ ಆಗಲಿದೆ. ಅನುದಾನ ಬಿಡುಗಡೆ ಆಗದೇ ಇರಬಹುದು ಆದರೆ ಸ್ಥಗಿತವಾಗಲು ಸಾಧ್ಯವಿಲ್ಲ ಎಂದು ಸ್ಪಷ್ಟನೆ ನೀಡಿದರು.
ಅಂಬೇಡ್ಕರ್ ವಸತಿ ಶಾಲೆಗಳು ಗೋಡೌನ್‌ನಲ್ಲಿ ನಡೆಯುತ್ತಿವೆ ವಿಚಾರಕ್ಕೆ ಕ್ರೈಸ್ ನಲ್ಲಿ ೮೨೧ ವಸತಿ ಶಾಲೆಗಳಿವೆ. ೬೦೦ ವಸತಿ ಶಾಲೆಗಳಿಗೆ ಸ್ವಂತ ಕಟ್ಟಡ ಇದೇ. ಇನ್ನೂ ೨೦೦ಕ್ಕೆ ಬಾಡಿಗೆ ನಲ್ಲಿ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ. ಎಲ್ಲೆಲ್ಲಿ ಬಾಡಿಗೆನಲ್ಲಿ ನಡೆಸಲಾಗುತ್ತೆ, ನಮಗೆ ೩೬ ಕಡೆ ಜಾಗ ಇದ್ದು ಅಲ್ಲಿ ಕಟ್ಟುತ್ತೇವೆ. ಜಾಗ ಇಲ್ಲದ ಕಡೆ ಜಾಗ ಒದಗಿಸಿಕೊಂಡು ಕಟ್ಟುತ್ತೇವೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ತಿಳಿಸಿದ್ದಾರೆ.