ಬಾಗಲಕೋಟೆ:ಮಹಿಳೆಯೊಬ್ಬರು ಮುಳ್ಳಿನ ಪೊದೆಯೊಂದರಲ್ಲಿ ಶಿಶುವಿಗೆ ಜನ್ಮ ನೀಡಿ ಬಿಟ್ಟು ಹೊರಟ ಸಂದರ್ಭದಲ್ಲಿ ಕುರಿಗಾಹಿಗಳು ನವಜಾತ ಶಿಶುವನ್ನ ರಕ್ಷಣೆ ಮಾಡಿರುವ ಘಟನೆ ಬಾಗಲಕೋಟೆಯ ತಾಲೂಕಿನ ಬೆನಕಟ್ಟಿ ಗ್ರಾಮದಲ್ಲಿ ನಡೆದಿದೆ.
ಬೆನಕಟ್ಟಿ ಹಾಗೂ ಕಮತಗಿ ಗ್ರಾಮದ ಮದ್ಯದ ರಸ್ತೆಯಲ್ಲಿ ಮಗುವಿಗೆ ಜನ್ಮ ನೀಡಿ ಬಿಟ್ಟು ಹೊರಟ ಮಹಾತಾಯಿಯನ್ನ ಕುರಿಗಾಹಿಗಳು ಗಮನಿಸಿ ನವಜಾತ ಶಿಶುವನ್ನ ರಕ್ಷಣೆ ಮಾಡಿದ್ದಾರೆ.
ಆದ್ರೆ ಮಹಿಳೆ ಮಾತ್ರ ಮಗು ತನ್ನದಲ್ಲ ಎಂದು ವಾದಿಸಿದ್ದು ನಂತರ ಬೆನಕಟ್ಟಿ ಹಾಗೂ ಸುತ್ತಲಿನ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. ಕುರಿಗಾಹಿಗಳಾದ ಹನಮಂತ ಗೊರಜನಾಳ,ಯಲ್ಲಪ್ಪ ಮಾದರ,ಮುತ್ತಪ್ಪ ಕುದರಿ ಅವರು ನವಜಾತ ಶಿಶುವನ್ನ ಬೆನಕಟ್ಟಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಪ್ಪಿಸಿದ್ದಾರೆ. ಬಾಗಲಕೋಟೆಯ ಗ್ರಾಮೀಣ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲಿಸಿದ್ದಾರೆ. ಆ ಮಹಿಳೆಯನ್ನ ಸಂಗೊಂದಿ ಗ್ರಾಮದ ನಿವಾಸಿ ಸಿದ್ದವ್ವ ಗದ್ದನಕೇರಿ ಎಂದು ಗುರ್ತಿಸಲಾಗಿದೆ.
ಸದ್ಯಕ್ಕೆ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನು ಗ್ರಾಮಸ್ಥರು ಮಹಿಳೆಯನ್ನ ತರಾಟೆಗೆ ತೆಗೆದುಕೊಂಡ ವೀಡಿಯೋ ವೈರಲ್ ಆಗಿದೆ.