ಮೈಸೂರು:ಬಿಬಿಎಂಪಿ ಬದಲು ನಿನ್ನೆ ಜಾರಿಗೆ ಬಂದ ಗ್ರೇಟರ್ ಬೆಂಗಳೂರು ವ್ಯವಸ್ಥೆಗೆ ಶೀಘ್ರದಲ್ಲಿ ಚುನಾವಣೆ ನಡೆಯಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮೈಸೂರಿನಲ್ಲಿ ಪ್ರಕಟಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕ್ಯಾಬಿನೆಟ್‌ನಲ್ಲಿ ಎಲ್ಲರೂ ಒಪ್ಪಿರುವ ಕಾರಣ ಸಬ್ ಕಮಿಟಿ ರಚನೆ ಶೀಘ್ರದಲ್ಲಿ ಮಾಡಲಾಗುವುದು ಎಂದರು.
ಆರ್. ಅಶೋಕ್ ಅವರ ಟೀಕೆಗೆ ಪ್ರತಿಕ್ರಿಯಿಸಿದ ಡಿಕೆಶಿ, ಅಶೋಕ್ ಮೊದಲೇ ವಿರೋಧ ಮಾಡಬಹುದಿತ್ತು, ಆದರೆ ಅವರು ತಾವೇ ಸಲಹೆ ನೀಡಿದ್ದರು. ಈಗ ಟೀಕೆ ಮಾಡುವುದು ಅವರ ಕೆಲಸ ಎಂದು ಹೇಳಿದರು.
ರಾಮನಗರ ಜಿಲ್ಲೆ ಹೆಸರು ಬದಲಾವಣೆಯೂ ಶೀಘ್ರದಲ್ಲೇ ನಡೆಯಲಿದ್ದು, ಶುಭ ಮುಹೂರ್ತ ನಿಗದಿಯಾಗುತ್ತಿದೆ ಎಂದರು. ಯುದ್ಧ ಕುರಿತಂತೆ ಅವರು, ದೇಶ ಮೊದಲ ಆದ್ಯತೆ, ಎಲ್ಲಾ ಪಕ್ಷಗಳ ಸಭೆ ಕರೆದಿರುವುದಾಗಿ, ಮತ್ತು ಪ್ರಧಾನಿಯ ನಿರ್ಣಯಕ್ಕೆ ಬದ್ಧತೆಯಿರುವುದಾಗಿ ಹೇಳಿದರು.
ಕಬಿನಿಯಲ್ಲಿ ಅಕ್ರಮ ರೆಸಾರ್ಟ್‌ಗಳ ಕುರಿತು ಮಾಹಿತಿ ಇಲ್ಲ ಎಂದು ತಿಳಿಸಿದ ಅವರು, ಪಟ್ಟಿ ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
“ಸಿಎಂ ಆಗಲು ಶುಭ ಗಳಿಗೆ ಬಂದಿದೆಯಾ?” ಎಂಬ ಪ್ರಶ್ನೆಗೆ ನಗುತ್ತಾ ತಮ್ಸಪ್ ಸಿಂಬಲ್ ತೋರಿಸಿ ಅವರು ಸ್ಪಂದನೆ ನೀಡಿದರು.