Sunday, April 20, 2025
Google search engine

Homeರಾಜ್ಯಹಸಿರೀಕರಣ ಕಾರ್ಯ ಇಂದಿನ ತುರ್ತು ಅಗತ್ಯ: ಡಿ. ಎಸ್. ಅರುಣ್

ಹಸಿರೀಕರಣ ಕಾರ್ಯ ಇಂದಿನ ತುರ್ತು ಅಗತ್ಯ: ಡಿ. ಎಸ್. ಅರುಣ್

ಶಿವಮೊಗ್ಗ: ಪರಿಸರ ಉಳಿಸಿ ಬೆಳಸುವಲ್ಲಿ ಹಸಿರೀಕರಣ ಕಾರ್ಯ ಮಹತ್ವದಾಗಿದೆ. ಈ ನಿಟ್ಟಿನಲ್ಲಿ ನಿರ್ಮಲ ತುಂಗಾ ಅಭಿಯಾನ ತಂಡ ದೊಡ್ಡ ಮಟ್ಟದಲ್ಲಿ ಗಿಡಗಳನ್ನು ನೆಡುವ ಕಾರ್ಯ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಹೇಳಿದರು.

ಅವರು ಇಂದು ಬೆಳಗ್ಗೆ  ತ್ಯಾವರೆ ಚಟ್ನಳ್ಳಿಯಲ್ಲಿರುವ ತ್ಯಾಜ್ಯ ನೀರು ಶುದ್ಧೀಕರಣ ಘಟಕ ಆವರಣದಲ್ಲಿ ನಿರ್ಮಲ ತುಂಗಾ ಅಭಿಯಾನ ತಂಡದ ಸಹಕಾರದೊಂದಿಗೆ ಚೆನ್ನೈ ಮೂಲದ ಸ್ವಿಂಗ್ ಸ್ಟೆಟರ್  ಸಂಸ್ಥೆಯು  ಹಮ್ಮಿಕೊಂಡಿದ್ದ ಬೃಹತ್ ಗಿಡಗಳ ನೆಡವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.

ವಿಶಾಲವಾದ ಇಲ್ಲಿನ ಆವರಣದಲ್ಲಿ ಸುಮಾರು 1750 ಗಿಡಗಳನ್ನು ನೆಟ್ಟು ಪೋಷಿಸುವ ಕಾರ್ಯಕ್ಕೆ ಮುಂದಾಗಿರುವುದು ಪರಿಸರಕ್ಕೆ  ನೀಡುವ ಉತ್ತಮ ಕೊಡುಗೆಯಾಗಿದ್ದು ಮುಂದಿನ ದಿನಗಳಲ್ಲಿ ನಗರದ ವಿವಿಧೆಡೆ  ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದು ಹೇಳಿದರು.

ಶಿವಮೊಗ್ಗದ  ತ್ಯಾಜ್ಯ ನೀರು  ಸಂಸ್ಕರಣ ಘಟಕಗಳು ಪೂರ್ಣ ಅವಧಿಯಲ್ಲಿ ಕಾರ್ಯ ನಿರ್ವಹಿಸುವಂತಾಗಬೇಕಾಗಿದ್ದು ಇದಕ್ಕೆ  ಈಗಿರುವ ಯು ಜಿ ಡಿ ವ್ಯವಸ್ಥೆಯಲ್ಲಿನ ಲೋಪ ದೋಷಗಳನ್ನು  ಅತಿ ಶೀಘ್ರವಾಗಿ ಸರಿಪಡಿಸಬೇಕು ಎಂದು ಹೇಳಿ ಈ ದಿಸೆಯಲ್ಲಿ ತಾವು ಶಾಸಕರು ಮತ್ತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವುದಾಗಿ  ಹೇಳಿದರು.

ಮಾಜಿ ನಗರಸಭೆ ಅಧ್ಯಕ್ಷ ಎಂ. ಶಂಕರ್, ಪ್ರಮುಖರಾದ ದಿನೇಶ್ ಶೇಟ್, ಬಾಲಕೃಷ್ಣ ನಾಯ್ಡು,  ಮೋಹನ್, ಗಣೇಶ್ ಬಾಳೆಕಾಯಿ ಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular