ಕೆ ಆರ್ ನಗರ: ಕೆ ಆರ್ ನಗರ ಪೊಲೀಸ್ ಇಲಾಖೆ ವತಿಯಿಂದ ವರ್ತಕರು ಮತ್ತು ಸಾರ್ವಜನಿಕರ ಕುಂದುಕೊರತೆಗಳ ಸಭೆಯನ್ನು ನೂತನ ಪೊಲೀಸ್ ಇನ್ಸ್ಪೆಕ್ಟರ್ ಪಿ ಪಿ ಸಂತೋಷ್ ರವರ ನೇತೃತ್ವದಲ್ಲಿ ನಗರದ ಕೃಷ್ಣಮಂದಿರದಲ್ಲಿ ನಡೆಸಲಾಯಿತು.
ಈ ವೇಳೆ ಮಾತನಾಡಿದ ಪಿ ಪಿ ಸಂತೋಷ್, ಆಗಬೇಕಾಗಿರುವ ಕೆಲಸಗಳು ಸಾರ್ವಜನಿಕ ಸಮಸ್ಯೆಗಳನ್ನು ಕೇಳಿದ ಸಂತೋಷ್ ಅವರು ಶೀಘ್ರದಲ್ಲಿಯೇ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ನೀಡಲಾಗುವುದು ಮತ್ತು ಕೆಆರ್ ನಗರದಲ್ಲಿ ಹೆಚ್ಚಿರುವ ಟ್ರಾಫಿಕ್ ಸಮಸ್ಯೆಯನ್ನು ಶೀಘ್ರದಲ್ಲಿಯೇ ಬಗೆಹರಿಸಲಾಗುವುದು ಎಂದರು.
ಪೊಲೀಸ್ ಇಲಾಖೆ ಇರುವುದು ನಿಮ್ಮ ಸೇವೆಗಾಗಿಯೇ ನಿಮ್ಮ ಕುಂದುಕೊರತೆಗಳನ್ನು ನಮ್ಮಲ್ಲಿ ತಿಳಿಸಿ ಕಾನೂನು ಪ್ರಕಾರ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಮತ್ತು ನಮ್ಮ ಪೊಲೀಸ್ ಇಲಾಖೆ ನಿಮ್ಮ ಸೇವೆಯಲ್ಲಿ ಸದಾ ಕಾಲವು ಬದ್ಧರಾಗಿರುತ್ತೆವೆ ಎಂದು ತಿಳಿಸಿದರು.