ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗೆ ಭರ್ಜರಿ ಯಶಸ್ಸು ಸಿಕ್ಕಿದ್ದು, ಈಗಾಗಲೇ ರಾಜ್ಯಾದ್ಯಂತ 97,09,259 ಗ್ರಾಹಕರಿಂದ ಗೃಹಜ್ಯೋತಿ ಯೋಜನೆಗೆ ಅರ್ಜಿ ನೊಂದಣಿ ಮಾಡಲಾಗಿದೆ.
ದಿನದಿಂದ ದಿನಕ್ಕೆ ಅರ್ಜಿದಾರರ ಸಂಖ್ಯೆಯಲ್ಲಿ ಏರಿಕೆ ಆಗುತ್ತಿದ್ದು, ಇದುವರೆಗೆ ಒಟ್ಟು 97, 09, 259 ಜನರಿಂದ ಅರ್ಜಿ ಸಲ್ಲಿಕೆಯಾಗಿದೆ. ಇಂದು ಈ ಅರ್ಜಿ ಪ್ರಮಾಣ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದ್ದು, ಸಂಜೆ ವೇಳೆಗೆ ಒಂದು ಕೋಟಿ ಮೀರುವ ಸಂಭವವಿದೆ.
ಹೊಸ ಲಿಂಕ್ ಮೂಲಕ ಅರ್ಜಿ ಸಲ್ಲಿಕೆ ಮಾಡಲಾಗಿದ್ದು, ರಾಕೆಟ್ ವೇಗದಲ್ಲಿರುವ ಸರ್ವರ್ ಕೆಲಸ ಮಾಡುತ್ತಿದೆ. ಇನ್ನು ಯಾವ ಯಾವ ಎಸ್ಕಾಂಗಳಲ್ಲಿ ಎಷ್ಟು ಅರ್ಜಿ ನೊಂದಣಿ ಆಗಿದೆ ಎಂದು ನೋಡುವುದಾದರೆ;
ಬೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 39,80,901 ಗ್ರಾಹಕರಿಂದ ಅರ್ಜಿ ಸಲ್ಲಿಕೆ
- ಚೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 14,95,545 ಜನರಿಂದ ಅರ್ಜಿ ಸಲ್ಲಿಕೆ
- ಜೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 10,17,080 ಜನರಿಂದ ಅರ್ಜಿ ಸಲ್ಲಿಕೆ
- ಹೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 20,39,277 ಗ್ರಾಹಕರಿಂದ ಅರ್ಜಿ ಸಲ್ಲಿಕೆ
- ಮೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 11,29,020ಲಕ್ಷ ಗ್ರಾಹಕರಿಂದ ಅರ್ಜಿ ಸಲ್ಲಿಕೆ
- HRECS ವ್ಯಾಪ್ತಿಯಲ್ಲಿ ಒಟ್ಟು 48.436 ಜನರಿಂದ ಅರ್ಜಿ ಸಲ್ಲಿಕೆ