Monday, April 21, 2025
Google search engine

Homeರಾಜ್ಯಸುದ್ದಿಜಾಲಗೃಹಲಕ್ಷ್ಮಿ ಎಲ್ಲರಿಗೂ ಬರುತ್ತದೆ: ಡಾ. ಯತೀಂದ್ರ ಸಿದ್ದರಾಮಯ್ಯ

ಗೃಹಲಕ್ಷ್ಮಿ ಎಲ್ಲರಿಗೂ ಬರುತ್ತದೆ: ಡಾ. ಯತೀಂದ್ರ ಸಿದ್ದರಾಮಯ್ಯ

ನಂಜನಗೂಡು:ಗೃಹಲಕ್ಷ್ಮಿ ಯೋಜನೆಯ ಹಣ ನೊಂದಾಯಿಸಿರುವ ಪ್ರತಿಯೊಬ್ಬ ಮಹಿಳೆಗೂ ಬರುತ್ತದೆ. ಇದರ ಬಗ್ಗೆ ಮಹಿಳೆಯರು ಯಾವುದೇ ಅನುಮಾನ ಪಡುವುದು ಬೇಡ ಎಂದು ವರುಣಾ ಕ್ಷೇತ್ರದ ಶಾಸಕ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು. ವರುಣಾ ಕ್ಷೇತ್ರದ ಮಲ್ಲೂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿರುಗುಂದ, ಸೋನಹಳ್ಳಿ, ಸಣ್ಣ ಮಲ್ಲುಪುರ, ಮಡಹಳ್ಳಿ, ಅಳಗಂಚಿ, ಅಳಗಂಚಿಪುರ, ಗ್ರಾಮಗಳಿಗೆ ಭೇಟಿ ನೀಡಿ ಜನಸಂಪರ್ಕ ಸಭೆ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು ಕಿರಗುಂದ ಸಂಪರ್ಕ ರಸ್ತೆ ಅಭಿವೃದ್ಧಿಗೆ
೧ ಕೋಟಿ ೨೦ ಲಕ್ಷ ಹಾಕಿದ್ದೇವೆ. ಟೆಂಡರ್ ಪ್ರಕ್ರಿಯೆಯಲ್ಲಿದೆ, ಗ್ರಾಮಠಾಣಾ ವ್ಯಾಪ್ತಿಯ ಜಾಗವನ್ನು ಸೈಟ್ ಕೊಡಲು ಹಾಗೂ ಸ್ಮಶಾನಕ್ಕೆ ಮೀಸಲಿಡಲು ಕ್ರಮ ಕೈಗೊಳ್ಳಬೇಕೆಂದು ಆರ್‌ಐ ಗೆ ಸೂಚಿಸಿದರು.

ಕಿರಗುಂದ ಗ್ರಾಮ ಬಹಳ ದೊಡ್ಡ ಗ್ರಾಮವಾಗಿದ್ದು. ಹಾಲಿನ ಡೈರಿಬೇಕು, ಗ್ರಂಥಾಲಯಬೇಕು, ಯುವಕರಿಗೆ ಕೆಲಸ, ನಿವೇಶನ, ಸ್ಮಶಾನಕ್ಕೆ ಜಾಗಬೇಕು, ಅಂಬೇಡರ್ ಪ್ರತಿಮೆ ನಿರ್ಮಾಣ, ದೇವಸ್ಥಾನಗಳ ಅಭಿವೃದ್ಧಿ, ಕೆರೆಗೆ ನೀರು ಸರಬರಾಜು, ನಾಲೆಗೆ ತಡೆಗೋಡೆ, ಶಾಲಾಕೊಠಡಿ ದುರಸ್ತಿ, ರಸ್ತೆಗಳ ಅಭಿವೃದ್ಧಿ ಪಡಿಸಿ ಕೊಡಬೇಕೆಂದು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಡಾ. ಯತೀಂದ್ರ ನಿಮ್ಮ ಎಲ್ಲಾ ಕೆಲಸಗಳನ್ನು ಹಂತ ಹಂತವಾಗಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಮಾಡಿಕೊಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಕೆ.ಎನ್. ವಿಜಯ್, ಆಪ್ತ ಸಹಾಯಕರಾದ ಶಿವಸ್ವಾಮಿ, ಪ್ರದೀಪ್ ಕುಮಾರ್, ರಾಜ್ಯ ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ. ಬಸವರಾಜು, ರಂಗಸ್ವಾಮಿ, ಎಪಿಎಂಸಿ ಅಧ್ಯಕ್ಷ, ದಕ್ಷಿಣಾಮೂರ್ತಿ, ಗ್ರಾ.ಪಂ ಅಧ್ಯಕ್ಷೆ ಕೋಮಲ, ಉಪಾಧ್ಯಕ್ಷ ಎಂ.ಆರ್. ಗುರಸ್ವಾಮಿ, ಗುರುಸಿದ್ದೇಗೌಡ, ರತ್ನಮ್ಮ, ಆನಂದ, ಶಿವನಾಗ, ಪ್ರಕಾಶ್, ಶ್ರೀನಿವಾಸ್, ಪುಟ್ಟಸ್ವಾಮಿ, ತಾಲ್ಲೋಕು ಮಟ್ಟದ ಎಲ್ಲಾ ಅಧಿಕಾರಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular