ಮಂಡ್ಯ: ನಾಳೆ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಹಿನ್ನಲೆ ಮನೆಯ ಮುಂದೆ ರಂಗೋಲಿ ಹಾಕಿ ಗ್ಯಾರಂಟಿ ಕಾರ್ಡ್ ಗೆ ಪೂಜೆ ಸಲ್ಲಿಸಿರುವ ಘಟನೆ ಮಂಡ್ಯ ತಾಲ್ಲೂಕಿನ ಮೊತ್ತಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮನೆಯ ಮುಂದೆ ನಾನೇ ಯಜಮಾನಿ ಎಂದು ವಿಶೇಷವಾಗಿ ರಂಗೋಲಿ ಹಾಕಿ ಗೃಹಲಕ್ಷ್ಮಿ ಯೋಜನೆಗೆ ಮಹಿಳೆಯರು ಸ್ವಾಗತ ಕೋರಿದ್ದಾರೆ. ಇದರೊಂದಿಗೆ ಗ್ಯಾರಂಟಿ ಕಾರ್ಡ್ ಗೆ ಮಹಿಳೆಯರು ಪೂಜೆ ಸಲ್ಲಿಸಿದ್ದಾರೆ
ಗೃಹಲಕ್ಷ್ಮಿ ಯೋಜನೆಗೆ ಮಹಿಳೆಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.
