ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಸಾಲಿಗ್ರಾಮ ತಾಲೂಕಿನ ಹಳಿಯೂರು ಸಮೀಪದ ದೊಡ್ಡಕೊಪ್ಪಲು ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡುತ್ತಿರುವ ಶ್ರೀ ಕರಿಯಮ್ಮ ತಾಯಿ ದೇವಾಲಯ ನಿರ್ಮಾಣಕ್ಕೆ ಶುಕ್ರವಾರ ಭೂಮಿ ಪೂಜೆ ನೇರವೇರಿಸಲಾಯಿತು. ಅಂದಾಜು ಸುಮಾರು 50 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿರುತ್ತಿರುವ ಈ ದೇವಾಲಯದ ನಿರ್ಮಾಣಕ್ಕೆ ಶ್ರೀ ಕರಿಯಮ್ಮ ದೇವರ ಕುಟುಂಬಸ್ಥರು ಒಟ್ಟುಗೂಡಿ ಭೂಮಿ ಪೂಜೆ ನೇರವೇರಿಸಿದರು.
ಹೆಬ್ಬಾಳಿನ ಪ್ರಸಿದ್ದ ಪುರೋಹಿತ್ ಸುರೇಶ್ ಕಶ್ಯಪ್ ಅವರ ಬೆಳಿಗ್ಗೆ 7 ಗಂಟೆಯಿಂದ 8.30 ರ ವರಿಗೆ ನೆಡದ ವಿವಿಧ ಧಾರ್ಮಿಕ ಫೂಜಾ ಕಾರ್ಯಕ್ರಮಗಳನ್ನು ನೇರವೇರಿಸಿ ನಂತರ ಗರ್ಭಗುಡಿ ಮತ್ತು ದೇವಾಲಯದ ನಿರ್ಮಾಣಕ್ಕೆ ಆಯಾ ನೇರವೇರಿಸಿ ಕೊಟ್ಟರು.
ಈ ಸಂದರ್ಭದಲ್ಲಿ ಮಾತನಾಡಿ ದೇವಾಲಯ ನಿರ್ಮಾಣ ಸಮಿತಿಯ ಕಾರ್ಯದರ್ಶಿ ಅರುಣ್ ಕಲ್ಲಹಟ್ಟಿ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಳಲಿ ಗ್ರಾಮದಲ್ಲಿ ಇರುವ ಶ್ರೀಕರಿಯಮ್ಮ ಮೂಲ ದೇವಾಲಯ ಇದ್ದು ದೇವರ ಅನುಗ್ರಹ ದಿಂದ ಇಲ್ಲಿ ದೇವಾಲಯ ನಿರ್ಮಿಸುತ್ತಿದ್ದು ಜನಪ್ರತಿನಿಧಿಗಳು ಮತ್ತು ಧಾನಿಗಳು ಸಹಕಾರ ನೀಡಬೇಕೆಂದರು.
ಈ ಸಂದರ್ಭದಲ್ಲಿ ದೇವಾಲಯ ನಿರ್ಮಾಣ ಸಮಿತಿಯ ಅಧ್ಯಕ್ಷ ಡಿ.ಎಂ.ವಿನಯ್, ಖಜಾಂಚಿ ಸಿ.ಎಚ್.ನವೀನ್, ಕಾರ್ಯದರ್ಶಿ ಅರುಣ್ ಕಲ್ಲಹಟ್ಟಿ, ಯಜಮಾನರಾದ ಕಂಡಕ್ಟರ್ ರಾಜಣ್ಣ,ದಲ್ಲಾಳಿ ಮಹದೇವ್, ನೆಸೆ ಕುಮಾರ್, ಸದಸ್ಯರಾದ ಸಿ.ಎಸ್.ಗಿರೀಶ್, ಸಿಳ್ಳೆಮಹದೇವ್, ಹರೀಶ್, ಲೋಕೇಶ್, ಚಂದ್ರ, ಸುನೀಲ್, ಕೋಲಕಾರಅಶೋಕ್, ಪುಜಾರಿಗಿರೀಶ್, ಮಿಳ್ಳೆ ರಮೇಶ್ , ನಿವೃತ್ತ ಶಿಕ್ಷಕಜಗದೀಶ್, ಸಿ.ಎಸ್.ಮೋಹನ್, ಕರೀಗೌಡ, ಬೋರೆಗೌಡ, ಸತೀಶ, ರೇವಣ್ಣ, ಸಿ.ಕೆ.ಕುಮಾರ್, ನಾರಾಯಣ್, ಉದಯ್ ಕುಮಾರ್, ಕೆಂಪರಾಜು, ಅಮಿತ್ ಗಾಂಧಿ, ಕಾರ್ತಿಕ್, ಪುಟ್ಟ, ತಮ್ಮಣ್ಣ, ವಿಜಿ, ವಕೀಲಜಗ್ಗು, ಶಶಿಧರ ಕಿರಣ್, ಕುಶಾಲ್, ಕುಪ್ಪೆ ಸೊಸೈಟಿ ಮಾಜಿ ಅಧ್ಯಕ್ಷ ಸಿ.ಟಿ.ಪಾರ್ಥ ಸೇರಿದಂತೆ ಮತ್ತಿತರು ಹಾಜರಿದ್ದರು.