ಬಳ್ಳಾರಿ: ಇಲ್ಲಿನ ಸಿದ್ದ ಉಡುಪು ಸಂಶೋಧನೆ ತರಬೇತಿ ವಿನ್ಯಾಸ ಮತ್ತು ಅಭಿವೃದ್ದಿ ಕೇಂದ್ರದ ಬಿ.ಎಸ್ಸಿ (ಗಾರ್ಮೆಂಟ್ ಮ್ಯಾನುಫ್ಯಾಕ್ಚರಿಂಗ್ ಟೆಕ್ನಾಲಜಿ) ವೃತ್ತಿಪರ ಪದವಿ ಕೋರ್ಸ್ನ ಅಂತಿಮ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಕಾಲೇಜಿನ ಪ್ರಾಚಾರ್ಯ ಅಜಿತ್ ಜಿ.ನಾಯಕ್ ಅವರು ಮಾತನಾಡಿ, ಈ ಕಾಲೇಜಿನಲ್ಲಿ ಬಿ.ಎಸ್ಸಿ (ಗಾರ್ಮೆಂಟ್ ಮ್ಯಾನುಫ್ಯಾಕ್ಚರಿಂಗ್ ಟೆಕ್ನಾಲಜಿ) ಪದವಿ ಕೋರ್ಸ್ ಹಾಗೂ ಸರ್ಟಿಫಿಕೇಟ್ ಕೋರ್ಸ್ಗಳು ನಡೆಯುತಿದ್ದು, ಇಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ರಾಜ್ಯದ ಸರ್ಕಾರಿ ಹಾಗೂ ಖಾಸಗಿ ವಲಯದ ಪ್ರತಿಷ್ಠಿತ ಗಾರ್ಮೆಂಟ್ಸ್ ಕಂಪನಿಗಳಲ್ಲಿ ಉದ್ಯೋಗ ಪಡೆದಿದ್ದಾರೆ ಮತ್ತು ಸ್ವಂತ ಉದ್ದಿಮೆದಾರರಾಗಿದ್ದಾರೆ ಎಂದು ಅವರು ಹೇಳಿದರು.
ಬಿ.ಎಸ್ಸಿ (ಗಾರ್ಮೆಂಟ್ ಮ್ಯಾನುಫ್ಯಾಕ್ಚರಿಂಗ್ ಟೆಕ್ನಾಲಜಿ) ವೃತ್ತಿಪರ ಪದವಿ ಕೋರ್ಸ್ಗೆ ಪ್ರವೇಶಾತಿಗೆ ಯಾವುದೇ ದ್ವಿತೀಯ ಪಿ.ಯು.ಸಿ (ಕಲೆ, ವಾಣಿಜ್ಯ, ವಿಜ್ಞಾನ, ಶಿಕ್ಷಣ) ವಿಭಾಗದಲ್ಲಿ ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳು ಅರ್ಹರಾಗಿದ್ದು, ಪ್ರವೇಶ ಪಡೆಯಬಹುದು ಎಂದರು.
ಈ ಸಂದರ್ಭದಲ್ಲಿ ಕಾಲೇಜಿನ ಬೋಧಕ ಸಿಬ್ಬಂಧಿಗಳು ಹಾಗೂ ಎಲ್ಲಾ ಬಿ.ಎಸ್ಸಿ (ಗಾರ್ಮೆಂಟ್ ಮ್ಯಾನುಫ್ಯಾಕ್ಚರಿಂಗ್ ಟೆಕ್ನಾಲಜಿ) ಪದವಿ ಕೋರ್ಸ್ನ ವಿದ್ಯಾಥಿಗಳು ಉಪಸ್ಥಿತರಿದ್ದರು.