ಚಾಮರಾಜನಗರ: ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪನವರ ಕವನಗಳಾದ ಎಲ್ಲೋ ಹುಡುಕಿದೆ ಇಲ್ಲದ ದೇವರ, ಕಾಣದ ಕಡಲಿಗೆ ಹಂಬಲಿಸಿದೆ ಮನ, ಮತ್ತು ಸ್ತ್ರೀ ಕವಿತೆ ಸಮಾಜದಲ್ಲಿ ಇಂದಿಗೂ ಪ್ರಭಾವ ಬೀರಿದೆ. ಕನ್ನಡ ಸಾಹಿತ್ಯ ಲೋಕವನ್ನು ತಮ್ಮ ಕಾವ್ಯ ಮತ್ತು ವಿಮರ್ಶೆಯ ಮೂಲಕ ಶ್ರೀಮಂತ ಗೊಳಿಸಿದ ಜಿಎಸ್ ಶಿವರುದ್ರಪ್ಪನವರು ರಾಷ್ಟ್ರಕವಿಯಾಗಿ ಲಕ್ಷಾಂತರ ಜನತೆ ಸದಾ ಕಾಲ ನೆನೆಸಿಕೊಳ್ಳುವ ಮೂಲಕ ಗೌರವ ನೀಡುತ್ತಿರುವುದು ಅವರ ಜನಪ್ರಿಯತೆಗೆ ಸಾಕ್ಷಿ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ರಾಜ ಯೋಗಿನಿ ಬಿ ಕೆ ದಾನೇಶ್ವರಿ ರವರು ಅಭಿಪ್ರಾಯ ಪಟ್ಟರು.

ಅವರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪನವರ ಕೊಡುಗೆಗಳು ಕುರಿತು ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡುತ್ತ ಮಾನವ ಜನ್ಮವೇ ವಿಶೇಷವಾದದ್ದು. ಮಾನವ ಜನ್ಮದಲ್ಲಿ ಅನೇಕ ಕಾರ್ಯ ನಿರ್ವಹಿಸುವ ಮನುಷ್ಯ ಒಂದೊಂದು ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡುತ್ತಾರೆ. ಸಾಹಿತ್ಯ ಕ್ಷೇತ್ರದಲ್ಲಿ ಶಿವರುದ್ರಪ್ಪನವರ ಕೊಡುಗೆ ಅವರ ಸೇವೆ ಶಾಶ್ವತವಾದದ್ದು . ಕನ್ನಡ ಸಾಹಿತ್ಯ ಪರಿಷತ್ತು ರಾಷ್ಟ್ರಕವಿ ಶಿವರುದ್ರಪ್ಪನವರ ಮತ್ತು ನೂರಾರು ಸಾಹಿತಿಗಳ ಸಾಹಿತ್ಯ ಲೋಕದ ಚಿಂತನೆಯನ್ನು ಅವರ ಸಾಧನೆಯನ್ನು ಸ್ಮರಿಸಿಕೊಳ್ಳುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿ ಯುವ ಪೀಳಿಗೆ ಕನ್ನಡ ಸಾಹಿತ್ಯವನ್ನು ಓದುವ ಮತ್ತು ಬರೆಯುವ ಹಾಗೂ ಕಲಿಯುವ ಮನಸ್ಸು ಮಾಡಬೇಕು ಎಂದರು.
ಉದ್ಘಾಟನೆಯನ್ನು ಕೊಳ್ಳೇಗಾಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಗರಾಜುರವರು ನೆರವೇರಿಸಿ ಮಾತನಾಡಿ ಜಿಎಸ್ ಶಿವರುದ್ರಪ್ಪನವರು ಬಡತನದಲ್ಲಿಯೇ ಬೆಳೆದು ತಮ್ಮ ಸಾಧನೆಯ ಮೂಲಕ ವಿಶ್ವಖ್ಯಾತಿಯಾದವರು. ಸಾಹಿತ್ಯವನ್ನು ಮತ್ತು ಸಂಸ್ಕೃತಿ ಮಾನವ ಪ್ರೇಮ ,ಪ್ರಕೃತಿಯ ರಮಣೀಯತೆ ಭಾವವನ್ನು ಆಸ್ವಾದಿಸಿ ನೂರಾರು ಸಂಕಲನಗಳನ್ನು, ವಿಮರ್ಶೆಗಳನ್ನು, ಕೃತಿಗಳನ್ನು ರಚಿಸಿದವರು . ಅವರ ಸಾಮಾಗಾನ, ಚೆಲುವು ಒಲವು ಅನಾವರಣ ,ತೆರೆದ ಬಾಗಿಲು ಮರೆಯಲಾಗದ ಸಾಹಿತ್ಯವಾಗಿದೆ ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ಜಿ ಎಸ್ ಎಸ್ ಎಂದೆ ಪ್ರಸಿದ್ಧರಾದ ಶಿವರುದ್ರಪ್ಪನವರು ಅಧ್ಯಾಪಕರಾಗಿ ,ಶಿಕ್ಷಣ ಪ್ರೇಮಿಯಾಗಿ ,ಸಾಹಿತ್ಯದ ಆರಾಧಕರಾಗಿ ಸಾಹಿತ್ಯ ರಚಿಸಿ ತಮ್ಮ ಸೃಜನಶೀಲತೆ ಬ ರವಣಿಗೆಯಿಂದ ಕನ್ನಡ ಸಾಹಿತ್ಯ ಲೋಕವನ್ನು ಅಪಾರ ಶ್ರೀಮಂತ ಗೊಳಿಸಿದ್ದಾರೆ . ನಾಡಿನ ಎಲ್ಲಡೆ ಅವರ ಶಿಷ್ಯ ವೃಂದವೇ ಇದೆ. ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಕನ್ನಡ ನಿಘಂಟು ರಚನೆಗೆ ಅವರೇ ಕಾರಣರಾದವರು. ದಾವಣಗೆರೆಯಲ್ಲಿ ನಡೆದ ಅರವತ್ತೊಂದನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿ ಯಶಸ್ವಿಗೊಳಿಸಿದವರು. ಅವರ ಗುರುಗಳಾದ ಟಿಎಸ್ ವೆಂಕಣ್ಣಯ್ಯ ತಾಸು ಶಾಮರಾಯರ ಸರಳ ಪ್ರಭಾವಕೆ ಒಳಗಾಗಿದ್ದವರು. ಶಿವರುದ್ರಪ್ಪನವರು ಭಾರತೀಯತೆಯ ತತ್ವಜ್ಞಾನ ಮತ್ತು ಪಾಶ್ಚತ್ಯದ ಚಿಂತನೆಗಳ ಮೂಲಕ ಕನ್ನಡ ಸಾಹಿತ್ಯವನ್ನು ಅತ್ಯಂತ ಪ್ರಭಾವಗೊಳಿಸಿದವರು. ಅವರ ರಚನೆಯ ಕವನ ಸಂಕಲನವಾದ ನಾಕುತಂತಿ ಕೃತಿ ಅರವತ್ತು ವರ್ಷ ತುಂಬಿದೆ. ನಾಲ್ಕು ತಂತಿಯ ಕೃತಿಯ ಮೇಲೆ ಮುಂದಿನ ದಿನಗಳಲ್ಲಿ ವಿಶೇಷ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಳ್ಳಲಿದೆ. ಅಲ್ಲದೆ ಜಿ ಎಸ್ ಶಿವರುದ್ರಪ್ಪನವರ ಶತಮಾನೋತ್ಸವದ ವರ್ಷವೂ ಇದಾಗಿದ್ದು, ನಾಡಿನ ಎಲ್ಲೆಡೆ ಕನ್ನಡ ಅಭಿಮಾನಿಗಳು ನಿರಂತರವಾಗಿ ಕನ್ನಡ ಸಾಹಿತ್ಯದ ಕಾರ್ಯಕ್ರಮವನ್ನು ರೂಪಿಸಬೇಕು ಎಂದು ಮನವಿ ಮಾಡಿದರು.
ಗಾಯಕಿ ಪದ್ಮಾಕ್ಷಿ ರವರು ಸುಮಧುರ ಗೀತೆಗಳು ಹಾಡಿದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಗದೀಶ್ ,ಬಿಕೆ ಆರಾಧ್ಯ ,ಕನ್ನಡ ಸಾಹಿತ್ಯ ಪರಿಷತ್ತಿನ ಸರಸ್ವತಿ, ಶಿವಲಿಂಗಮೂರ್ತಿ , ಪದ್ಮಾ ಪುರುಷೋತ್ತಮ, ಪರಮೇಶ್ವರಪ್ಪ,ಕೊಳ್ಳೇಗಾಲದ ಲಯನ್ ಸಂಸ್ಥೆಯ ಸುಜ್ಞಾನ ಮೂರ್ತಿ, ಮುಂತಾದವರು ಉಪಸ್ಥಿತರಿದ್ದರು