Sunday, April 20, 2025
Google search engine

Homeಸ್ಥಳೀಯಮುಡಾ ಹಗರಣದಲ್ಲಿ ಜಿ.ಟಿ ದೇವೇಗೌಡರ ಅಕ್ರಮವು ಇದೆ : ಸ್ನೇಹಮಯಿ ಕೃಷ್ಣ ಆರೋಪ!

ಮುಡಾ ಹಗರಣದಲ್ಲಿ ಜಿ.ಟಿ ದೇವೇಗೌಡರ ಅಕ್ರಮವು ಇದೆ : ಸ್ನೇಹಮಯಿ ಕೃಷ್ಣ ಆರೋಪ!

ಮೈಸೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಇದೀಗ ಲೋಕಾಯುಕ್ತ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದು ಇಂದು ಶುಕ್ರವಾರ ಮೈಸೂರಿನ ವಿಜಯನಗರದಲ್ಲಿರುವ, ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಹೆಸರಿನಲ್ಲಿದ್ದ ೧೪ ಸೈಟ್‌ಗಳ ಸ್ಥಳ ಮಹಜರು ನಡೆಸಿದರು. ಇದೇ ವೇಳೆ ಸ್ಥಳದಲ್ಲಿದ್ದ ದೂರುದಾರ ಸ್ನೇಹಮಯಿ ಕೃಷ್ಣ ಮುಡಾ ಹಗರಣದಲ್ಲಿ ಜಿಟಿ ದೇವೇಗೌಡರ ಅಕ್ರಮವು ಇದೆ ಎಂದು ಆರೋಪ ಮಾಡಿದರು.

ಸ್ಥಳ ಮಹಜರು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಬೆನ್ನಿಗೆ ನಿಂತಿರುವ ಜಿಟಿ ದೇವೇಗೌಡ ವಿರುದ್ಧ ಹೇಳಿಕೆ ನೀಡಿದ್ದು ಮುಡಾದಲ್ಲಿ ಜಿಟಿ ದೇವೇಗೌಡರ ಅಕ್ರಮವಿರಬಹುದು ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ. ಅವರು ಈ ಒಂದು ಹಗರಣದಲ್ಲಿ ಭಾಗಿಯಾಗಿರುವುದರಿಂದ ಈ ಕಾರಣಕ್ಕಾಗಿ ಸಿಎಂ ಸಿದ್ದರಾಮಯ್ಯ ಪರವಾಗಿ ಮಾತನಾಡಿದ್ದಾರೆ ಎಂದು ಅವರು ಆರೋಪಿಸಿದರು.

ಅಲ್ಲದೆ ಊಅ ಮಾದೇವಪ್ಪ ಸಹೋದರ ಮಗನಿಗೂ ಸೈಟ್ ಕೊಡಲಾಗಿದೆ. ಮರಿಗೌಡ ಸಹೋದರನಿಗೂ ಶಿವಣ್ಣನಿಗೂ ಸೈಟ್ ಕೊಡಲಾಗಿದೆ ಕಳ್ಳರು ಕಳ್ಳರು ಎಲ್ಲರೂ ಒಂದಾಗಿದ್ದಾರೆ. ಹಾಗಾಗಿ ಹೀಗೆ ಹೇಳುತ್ತಿದ್ದಾರೆ ತಮ್ಮ ರಕ್ಷಣೆಗಾಗಿ ಕೂಟವನ್ನು ರಚನೆ ಮಾಡಿಕೊಂಡಿದ್ದಾರೆ ಎಂದು ದೂರು ದಾದ ಸ್ನೇಹಮಯಿ ಕೃಷ್ಣ ಸ್ಫೋಟಕ ಹೇಳಿಕೆ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular