Friday, April 4, 2025
Google search engine

Homeಬ್ರೇಕಿಂಗ್ ನ್ಯೂಸ್ಉದ್ಯೋಗಡಿ.11ರ ಜಿಟಿಟಿಸಿ ಪರೀಕ್ಷೆ ಡಿ.12 ಕ್ಕೆ ಮುಂದೂಡಿಕೆ

ಡಿ.11ರ ಜಿಟಿಟಿಸಿ ಪರೀಕ್ಷೆ ಡಿ.12 ಕ್ಕೆ ಮುಂದೂಡಿಕೆ

ಬೆಂಗಳೂರು: ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿನ (ಜಿಟಿಟಿಸಿ) ಖಾಲಿ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಡಿ.೧೧ರಂದು ನಿಗದಿಯಾಗಿದ್ದ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಾಳೆ ಡಿಸೆಂಬರ್ ೧೨ ಕ್ಕೆ ಮುಂದೂಡಿಕೆ ಮಾಡಲಾಗಿದೆ.

ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ಅವರ ನಿಧನದ ಹಿನ್ನೆಲೆಯಲ್ಲಿ ಸರ್ಕಾರ ಶೋಕಾಚರಣೆ ಹಾಗೂ ಸಾರ್ವಜನಿಕ ರಜೆ ಘೋಷಿಸಿದೆ. ಹೀಗಾಗಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿನ (ಜಿಟಿಟಿಸಿ) ಖಾಲಿ ಹುದ್ದೆಗಳ ನೇಮಕಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಡಿ.೧೧ರಂದು ನಿಗದಿ ಮಾಡಿದ್ದ ಸ್ಪರ್ಧಾತ್ಮಕ ಪರೀಕ್ಷೆಯನ್ನು ಡಿಸೆಂಬರ್ ೧೨ ಕ್ಕೆ ಮುಂದೂಡಿಕೆ ಮಾಡಲಾಗಿದೆ.

ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಡಿ.೧೧ರಂದು ಜಿಟಿಟಿಸಿ ನೇಮಕ ಪರೀಕ್ಷೆ ಡಿ.೧೨ಕ್ಕೆ ಮುಂದೂಡಿಕೆಯಾಗಿದೆ. ಉಳಿದಂತೆ ಡಿ.೧೪ರಂದು ನಿಗದಿಯಾಗಿದ್ದ ಗ್ರೇಡ್ ೨ ಅಧಿಕಾರಿಗಳ ಹುದ್ದೆ ಪರೀಕ್ಷೆ ವೇಳಾ ಪಟ್ಟಿ ಹಾಗೂ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಿದೆ.

ಪಿಜಿ ವೈದ್ಯಕೀಯ ದಾಖಲೆ ಸಲ್ಲಿಕೆ: ಉಖಿಖಿಅ ಜೊತೆಗೆ, Pಉ ವೈದ್ಯಕೀಯ ಕೋರ್ಸ್‌ಗಳಿಗೆ ಎರಡನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸುವ ಅರ್ಹ ಅಭ್ಯರ್ಥಿಗಳಿಗೆ ದಾಖಲೆ ಸಲ್ಲಿಕೆಗಳನ್ನು ಏಇಂ ಪ್ರಕಟಿಸಿದೆ. ಅಭ್ಯರ್ಥಿಗಳು ಡಿಸೆಂಬರ್ ೬ ಮತ್ತು ೧೭ ರ ನಡುವೆ ತಮ್ಮ ವರ್ಗವನ್ನು ಆಧರಿಸಿ ಏಇಂ ಕಚೇರಿಯಲ್ಲಿ ಮೂಲ ದಾಖಲೆಗಳನ್ನು ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗಾಗಿ, ಏಇಂ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

RELATED ARTICLES
- Advertisment -
Google search engine

Most Popular