ಗುಂಡ್ಲುಪೇಟೆ : ತಾಲೂಕಿನ ಬೇಗೂರು ಸಮೀಪದ ಅರೇಪುರ ಗ್ರಾಮದ ಶ್ರೀಮಲೆ ಮಹದೇಶ್ವರಸ್ವಾಮಿ ದೇವಸ್ಥಾನದ ಗೋಪುರ ನಿರ್ಮಾಣ ಕಾಮಗಾರಿಗೆ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎಚ್. ಎಂ. ಗಣೇಶ್ ಪ್ರಸಾದ್ ಭೂಮಿಪೂಜೆ ನೆರವೇರಿಸಿದರು.
ಗ್ರಾಮಕ್ಕೆ ಗಣೇಶ್ ಪ್ರಸಾದ್ ಬೆಂಬಲಿಗರು ಹಾಗೂ ಕಾಂಗ್ರೆಸ್‌ನ ಮುಖಂಡರೊಂದಿಗೆ ಭೇಟಿ ನೀಡಿದ ಶಾಸಕರು, ಗ್ರಾಮದ ಮಹದೇಶ್ವರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಸ್ಥಾನದ ಗೋಪುರ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿ, ಈಗಾಗಲೇ ದೇವಸ್ಥಾನದ ಕಾಮಗಾರಿಗೆ 4.5 ಲಕ್ಷ ರೂ.ಗಳು ಅನುದಾನ ಮಂಜೂರು ಮಾಡಲಾಗಿದೆ. ಮುಂದಿನ ದಿನಗಳಲ್ಲಿಯೂ ದೇವಸ್ಥಾನದ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲು ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಇದೆ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ನಂದೀಶ್, ಮಹದೇವಪ್ರಸಾದ್, ಸದಸ್ಯ ಚಿಕ್ಕಾಟಿ ಮಹೇಶ್, ಎಪಿಎಂಸಿ ಸದಸ್ಯ ರಂಗೂಪುರ ನಾಗರಾಜು, ಬಂಗಾರನಾಯ್ಕ, ರಾಚಪ್ಪ, ಬಸವನಾಯ್ಕ ವೆಂಕಟನಾಯ್ಕ, ರಂಗಸ್ವಾಮಿ, ಮಲ್ಲಶೆಟ್ಟಿ, ಸಿದ್ದರಾಜು, ದೇವಸ್ಥಾನದ ಅರ್ಚಕರಾದ ಮಾದಪ್ಪ, ಪಟೇಲ್ ರಾಜಪ್ಪ ಹಾಗೂ ಅರೇಪುರ ಗ್ರಾಮಸ್ಥರು, ಭಕ್ತಾಧಿಗಳು, ಮುಖಂಡರು ಹಾಜರಿದ್ದರು.