ಗುಂಡ್ಲುಪೇಟೆ: ಮಾಜಿ ಸಂಸದ ದಿವಂಗತ ಆರ್.ಧ್ರುವನಾರಾಯಣ 62ನೇ ಹುಟ್ಟುಹಬ್ಬದ ಹಿನ್ನೆಲೆ ಅಭಿಮಾನಿಗಳ ಬಳಗದಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ಹಂಪಲು ಹಾಗೂ ಬ್ರೇಡ್ ವಿತರಿಸುವ ಮೂಲಕ ಸರಳವಾಗಿ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಆರ್.ಲಕ್ಕೂರು ಮಾತನಾಡಿ, ಅಭಿವೃದ್ಧಿಯಲ್ಲಿ ದೇಶದ 4ನೇ ಸಂಸದರು ಹಾಗೂ ರಾಜ್ಯದ ನಂಬರ್ ಒನ್ ಸಂಸದಗಿದ್ದ ಅಜಾತಶತ್ರು ಆರ್.ಧ್ರುವನಾರಾಯಣ್ ಅಕಾಲಿಕ ಮರಣದಿಂದ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಅವರು ಶಿಕ್ಷಣ, ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಮೂಲಕ ಸರಳ ಸಜ್ಜನಕ್ಕೆ ಹಾಗೂ ಮಾದರಿ ರಾಜಕಾರಣಿಯಾಗಿದ್ದರು ಎಂದು ತಿಳಿಸಿದರು.
ಈ ವೇಳೆ ಆರ್.ಧ್ರುವನಾರಾಯಣ ಅಭಿಮಾನಿಗಳ ಬಳಗ ಭೀಮನಬೀಡು ಮಲ್ಲಿಕಾರ್ಜುನ, ಬೆಳವಾಡಿ ರವೀಶ್, ಕಣ್ಣೇಗಾಲ ಮಾದೇಶ್, ಬೆಂಡಗಳ್ಳಿ ಮಹದೇವ್, ಕಲ್ಲಿಗೌಡನಹಳ್ಳಿ ಮಹೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.