Saturday, April 19, 2025
Google search engine

Homeಅಪರಾಧಕಾನೂನುಗುಂಡ್ಲುಪೇಟೆ:ಕನ್ನೇಗಾಲ ಗ್ರಾಮದಲ್ಲಿ ‌ಕಾನೂನು ಅರಿವು-ನೆರವು ಶಿಬಿರ

ಗುಂಡ್ಲುಪೇಟೆ:ಕನ್ನೇಗಾಲ ಗ್ರಾಮದಲ್ಲಿ ‌ಕಾನೂನು ಅರಿವು-ನೆರವು ಶಿಬಿರ

ಗುಂಡ್ಲುಪೇಟೆ: ತಾಲ್ಲೂಕಿನ ಕನ್ನೇಗಾಲ ಗ್ರಾಮದಲ್ಲಿ ಚಾಮರಾಜನಗರ ಜಿಲ್ಲಾ ಪಂಚಾಯಿತಿ ಗುಂಡ್ಲುಪೇಟೆ ತಾಲೂಕು ಪಂಚಾಯಿತಿ ಕನ್ನೇಗಾಲ ಗ್ರಾಮ ಪಂಚಾಯಿತಿ ಹಾಗೂ ನಿಸರ್ಗ ಟ್ರಸ್ಟ್ ವತಿಯಿಂದ ‌ಕಾನೂನು ಅರಿವು ನೆರವು ಮತ್ತು ‌ಆರೋಗ್ಯ ನೈರ್ಮಲ್ಯ ಜಾಗೃತಿ ಶಿಬಿರ ಕಾರ್ಯಕ್ರಮವನ್ನು ‌ನಡೆಸಲಾಯಿತು.

ಕಾರ್ಯಕ್ರಮದಲ್ಲಿ ವಕೀಲ ಬಂಗಾರನಾಯಕ್ ಮಾತನಾಡಿ ‌ ಗ್ರಾಮೀಣ ಭಾಗದ ಜನತೆಗ ಸಾರ್ವಜನಿಕರಿಗೆ ಸರ್ಕಾರದಿಂದ ದೊರೆಯಬಹುದಾದ ಸೌಲಭ್ಯಗಳು, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ಬಡವರಿಗೆ, ಹಿಂದುಳಿದವರಿಗೆ, ನಿರ್ಗತಿಕರಿಗೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ, ವಿಕಲಚೇತನರಿಗೆ ಮಧ್ಯಮ ವರ್ಗದವರಿಗೆ ಭಾರತದ ಸಂವಿಧಾನದ ಪ್ರಕಾರ ದೊರೆಯುವ ಕಾನೂನು ಸವಲತ್ತುಗಳ ಬಗ್ಗೆ ಹಾಗೂ ಹೆಣ್ಣು ಮಕ್ಕಳಿಗೆ ಇರುವ ಆಸ್ತಿ ಹಕ್ಕು, ಜೀವನಾಂಶದ ಹಕ್ಕು, ಹಿರಿಯ ನಾಗರೀಕರ ಹಕ್ಕು, ದಾನ, ದತ್ತು ಸ್ವೀಕಾರ, ಮರಣ ಶಾಸನ, ಎಸ್. ಸಿ. ಮತ್ತು ಎಸ್. ಟಿ. ಕಾಯ್ದೆ ಬಗ್ಗೆ ಹಾಗೂ ಇನ್ನೂ ಮುಂತಾದ ವಿಚಾರಗಳ ಬಗ್ಗೆ ನ್ಯಾಯವಾದಿಗಳಾದ ಬಂಗಾರ ನಾಯಕ ರವರು ಸವಿವರವಾಗಿ ತಿಳಿಸಿದರು.

ಸಮಾಜದಲ್ಲಿ ಪ್ರತಿಯೊಬ್ಬರಿಗೂ ಕಾನೂನು ಅವಶ್ಯಕವಾಗಿದೆ. ಸಾರ್ವಜನಿಕರು ಕಾನೂನು ಸೇವೆ ಬಳಸಿಕೊಳ್ಳಬೇಕು. ಹಳ್ಳಿಗಾಡಿನಲ್ಲಿ ಕಾನೂನು ಬಹಿಷ್ಕರಿಸುವ ಕ್ರಿಯೆ ಕಾಣುತ್ತಿದ್ದು, ಅನಕ್ಷರಸ್ಥರ ಸಂಖ್ಯೆ ಹೆಚ್ಚಾಗಿರುವಲ್ಲಿ ಅಪರಾಧಗಳು ಅರಿವಿಲ್ಲದೆ ನಡೆಯುತ್ತಿವೆ ಎಂದು ಹೇಳಿದರು.

ಸಮಾಜದಲ್ಲಿ ದುರ್ಬಲರು, ಶೋಷಿತವರ್ಗದ ಜನತೆಗೆ ಉಚಿತ ಕಾನೂನು ಸಲಹೆ ನೀಡಲಾಗುತ್ತಿದೆ. ವಾರ್ಷಿಕ ಆದಾಯ 50 ಸಾವಿರ ರೂ. ಒಳಪಟ್ಟವರು ಈ ಸೌಲಭ್ಯ ಪಡೆಯಬಹುದು ಎಂದು ತಿಳಿಸಿದರು

ಕನ್ನೇಗಾಲ‌ ಗ್ರಾಮ ಪಂಚಾಯತಿ ಸದಸ್ಯರಾದ ನಾಗಲಿಂಗಸ್ವಾಮಿ.ಹೊನ್ನೇಗೌಡನಹಳ್ಳಿ ಶಿವಮಲ್ಲು, ಚಿಕ್ಕಕೂಸಯ್ಯ ಪಂಚಾಯತಿ ಅಭಿವೃದ್ಧಿ ‌ಅಧಿಕಾರಿ ಪಾಲಾಕ್ಷ, ನಿಸರ್ಗ ನಾಗರಾಜು, ಆಶಾ ಕಾರ್ಯಕರ್ತೆಯರು, ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular