ಗುಂಡ್ಲುಪೇಟೆ: ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ರಸ್ತೆಯಲ್ಲಿ ಶ್ರೀ ರಾಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮೊದಲನೇ ಆಷಾಢ ಶುಕ್ರವಾರದ ಪ್ರಯುಕ್ತ ಪಾರ್ವತಮ್ಮನವರಿಗೆ ತೊಟ್ಟಿಲು ಉತ್ಸವ ಮಾಡಲಾಯಿತು.
ರಾಮೇಶ್ವರ ಸ್ವಾಮಿ ಹಾಗೂ ಪಾರ್ವತಮ್ಮನವರ ಮೂರ್ತಿಗೆ ಆಷಾಢ ಮಾಸದ ಹಿನ್ನೆಲೆ ವಿವಿಧ ಬಗೆಯ ಅಭಿಷೇಕ ಹಾಗು ವಿವಿಧ ಹೂವಿಗಳಿಂದ ವಿಶೇಷ ಅಲಂಕಾರ ಮಾಡಿ ದೇವಸ್ಥಾನದ ಅರ್ಚಕ ಶಂಕರನಾರಾಯಣ ಜೋಯಿಸಿ ಮಹಾ ಮಂಗಳಾರತಿ ನೆರವೇರಿಸಿದರು. ಈ ವೇಳೆ ನೂರಾರು ಮಂದಿ ಭಕ್ತಾದಿಗಳು ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಕೆ ಮಾಡಿದರು. ಆಗಮಿಸಿದ ಭಕ್ತರಿಗೆ ದೇವಸ್ಥಾನದ ವತಿಯಿಂದ ಸಿಹಿ ಪೆÇಂಗಲ್ ಪ್ರಸಾದ ವಿತರಣೆ ಮಾಡಲಾಯಿತು. ಸಂಜೆ ಭಕ್ತಾದಿಗಳಿಂದ ಸಂಗೀತ ಹಾಡು ಹೇಳಿಸಿ ಹಾಗೂ ಮಂಗಳಾರತಿ ನಡೆಯಿತು.
ಫ್ಲೇಗ್ ಮಾರಮ್ಮನ ದೇವಸ್ಥಾನದಲ್ಲಿ ವಿಶೇಷ ಪೂಜೆ: ಮೊದಲ ಆಷಾಢ ಶುಕ್ರವಾರ ಹಿನ್ನೆಲೆ ಪಟ್ಟಣದ ಫ್ಲೇಗ್ ಮಾರಮ್ಮನ ದೇವಸ್ಥಾನಕ್ಕೆ ಸಾವಿರಾರು ಮಂದಿ ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಆಷಾಢದ ಹಿನ್ನೆಲೆ ದೇವಸ್ಥಾನಕ್ಕೆ ಮಹಿಳೆಯರೇ ಬೆಳಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೀಪದಾರತಿ ಮಾಡಿ ಹರಕೆ ತೀರಿಸಿದರು. ದೇವರ ಮೂರ್ತಿಗೆ ವಿಶೇಷ ಹೂವಿನ ಅಲಂಕಾರ ಮಾಡಿ ಅರ್ಚಕರು ಪೂಜೆ ನೆರವೇರಿಸಿದರು. ಈ ವೇಳೆ ಪ್ರಸಾದ ವಿನಿಯೋಗವೂ ಕೂಡ ನಡೆಯಿತು.