ಗುಂಡ್ಲುಪೇಟೆ: ಪಟ್ಟಣದ ಟೀ ಅಂಗಡಿಯೊಂದರ ಮೇಲ್ಛಾವಣಿ ಕತ್ತರಿಸಿ ಒಳ ನುಗ್ಗಿದ ಕಳ್ಳರು ಅಂಗಡಿಯಲ್ಲಿದ್ದ ನಗದು ಹಣ, ಸಿಗರೇಟ್ ಪ್ಯಾಕ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಕದ್ದೊಯ್ದಿರುವ ಘಟನೆ ಬುಧವಾರ ತಡರಾತ್ರಿ ನಡೆದಿದೆ.
ಪಟ್ಟಣದ ಕೆಪಿಟಿ ಹೋಟೆಲ್ ಮುಂಭಾಗದ ಸಿದ್ದಪ್ಪಾಜಿ ಟೀ ಅಂಗಡಿಯಲ್ಲಿ ರಾತ್ರಿ ವೇಳೆ ಕಳ್ಳರು ತಮ್ಮ ಕೈಚಳಕ ತೋರಿದ್ದು, ಅಂಗಡಿ ಮೇಲ್ಛಾವಣಿ ಕತ್ತಿರಿಸಿ ನುಗ್ಗಿರುವ ಖದೀಮರು ಗಲ್ಲಾ ಪೆಟ್ಟಿಗೆಯಲ್ಲಿದ್ದ ಸುಮಾರು 40 ಸಾವಿರಕ್ಕೂ ಹೆಚ್ಚು ಹಣ ಮತ್ತು ಇನ್ನಿತರ ವಸ್ತುಗಳನ್ನು ಕಳವು ಮಾಡಿದ್ದಾರೆ ಎಂದು ಮಾಲೀಕರಾದ ಮಾಲೀಕ ಮೂರ್ತಿ ತಿಳಿಸಿದರು. ಘಟನಾ ಸ್ಥಳಕ್ಕೆ ಗುಂಡ್ಲುಪೇಟೆ ಅಪರಾಧ ವಿಭಾಗದ ಪೆÇಲೀಸರು ತೆರಳಿ ಪರಿಶೀಲನೆ ನಡೆಸಿ ದೂರು ದಾಖಲಿಸಿದ್ದಾರೆ.
ನಿವಾಸಿಗಳಲ್ಲಿ ಆತಂಕ: ಪಟ್ಟಣದ ಜನತಾ ಕಾಲೋನಿಯಲ್ಲಿ ಕಳೆದ ವಾರ ಮನೆ ಕಳ್ಳತನವಾಗಿ ಖದೀಮರು, ಚಿನ್ನಾ ಭರಣ ದೋಚಿದ್ದರು. ಇದರ ಬೆನ್ನಲ್ಲೆ ಬುಧವಾರ ತಡರಾತ್ರಿಯೂ ಕೂಡ ಅಂಗಡಿಯೊಂದಲ್ಲಿ ಕಳ್ಳತನವಾಗಿರುವುದು ನಿವಾಸಿಗಳಿಗೆ ಆತಂಕ ತಂದೊಡ್ಡಿದೆ.
ಈ ಬಗ್ಗೆ ಇತ್ತೀಚೆಗೆ ನಡೆದ ಶಾಸಕರ ಸಭೆಯಲ್ಲಿ ಪಟ್ಟಣದಲ್ಲಿ ನಿರಂತರವಾಗಿ ಕಳ್ಳತನ ನಡೆಯುತ್ತಿದ್ದರು ಕಳ್ಳರನ್ನು ಹಿಡಿಯಲು ಪೆÇಲೀಸ್ ಇಲಾಖೆ ವಿಫಲವಾಗಿದೆ ಎಂದು ಶಾಸಕರ ಬಳಿ ಸಾರ್ವಜನಿಕರು ದೂರು ನೀಡಿದಕ್ಕೆ ಉತ್ತರಿಸಿದ ವೃತ್ತ ನಿರೀಕ್ಷರು ಪಟ್ಟಣದ ವ್ಯಾಪ್ತಿಯಲ್ಲಿ ರಾತ್ರಿ ಗಸ್ತಿಗೆ ಹೆಚ್ಚಿನ ಪೆÇೀಲಿಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದ್ದರು. ಆದರೆ ಮರು ದಿನಕ್ಕೆ ರಾಷ್ಟ್ರೀಯ ಹೆದ್ದಾರಿಯ ಬಳಿಯಿರುವ ಟೀ ಅಂಗಡಿಯಲ್ಲಿ ಕಳ್ಳತನ ನಡೆದಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.