Tuesday, April 8, 2025
Google search engine

HomeUncategorizedರಾಷ್ಟ್ರೀಯಛತ್ತೀಸ್‌ಗಢದಲ್ಲಿ ಗುಂಡಿನ ಚಕಮಕಿ; 7 ನಕ್ಸಲರ ಎನ್​ಕೌಂಟರ್

ಛತ್ತೀಸ್‌ಗಢದಲ್ಲಿ ಗುಂಡಿನ ಚಕಮಕಿ; 7 ನಕ್ಸಲರ ಎನ್​ಕೌಂಟರ್

ನಾರಾಯಣಪುರ: ಛತ್ತೀಸ್​ಗಢದಲ್ಲಿ ನಡೆದ ಎನ್​ಕೌಂಟರ್ ಕಾರ್ಯಾಚರಣೆಯಲ್ಲಿ 7 ಮಂದಿ ನಕ್ಸಲರನ್ನು ಹತ್ಯೆ ಮಾಡಲಾಗಿದೆ. ಈ ಘಟನೆಯ ಸ್ಥಳದಿಂದ ಪೊಲೀಸರು 7 ಶಸ್ತ್ರಾಸ್ತ್ರಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಸಂಜೆಯವರೆಗೂ ಎನ್‌ಕೌಂಟರ್ ಕಾರ್ಯಾಚರಣೆ ನಡೆದಿದೆ. ಸಾವನ್ನಪ್ಪಿದ ನಕ್ಸಲರ ಗುರುತು ಇನ್ನೂ ಪತ್ತೆಯಾಗಿಲ್ಲ.

ಛತ್ತೀಸ್‌ಗಢದಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ 7 ನಕ್ಸಲೀಯರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಖಚಿತ ಪಡಿಸಿದ್ದಾರೆ. ಕೆಲವು ದಿನಗಳ ಹಿಂದೆ, ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಸುಮಾರು 10 ನಕ್ಸಲೀಯರನ್ನು ಬಂಧಿಸಲಾಯಿತು. ಅವರಲ್ಲಿ ಒಬ್ಬನನ್ನು ಹಿಡಿದರೆ 1 ಲಕ್ಷ ರೂ. ನೀಡುವುದಾಗಿ ಘೋಷಿಸಲಾಗಿತ್ತು. ಅದಕ್ಕೂ ಮುನ್ನ ಭದ್ರತಾ ಪಡೆಗಳ ಜತೆಗಿನ ಗುಂಡಿನ ಚಕಮಕಿಯಲ್ಲಿ 12 ನಕ್ಸಲರು ಹತರಾಗಿದ್ದರು.

ಛತ್ತೀಸ್‌ಗಢದಲ್ಲಿ ಭದ್ರತಾ ಸಿಬ್ಬಂದಿಯ ಜಂಟಿ ತಂಡವು ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಬೆಳಿಗ್ಗೆ 11 ಗಂಟೆ ಸುಮಾರಿಗೆ ಗುಂಡಿನ ಚಕಮಕಿ ನಡೆಯಿತು. ಈ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ನಾರಾಯಣಪುರ ಪೊಲೀಸ್ ವರಿಷ್ಠಾಧಿಕಾರಿ ಪ್ರಭಾತ್ ಕುಮಾರ್ ತಿಳಿಸಿದ್ದಾರೆ.

ಎನ್‌ಕೌಂಟರ್ ಸ್ಥಳದಿಂದ ಇಬ್ಬರು ನಕ್ಸಲೀಯರ ಶವಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಾರಾಯಣಪುರ ಪೊಲೀಸ್ ವರಿಷ್ಠಾಧಿಕಾರಿ ಪ್ರಭಾತ್ ಕುಮಾರ್ ಈ ಹಿಂದೆ ಮಾಹಿತಿ ನೀಡಿದ್ದಾರೆ. ದಾಂತೇವಾಡ, ನಾರಾಯಣಪುರ ಮತ್ತು ಬಸ್ತಾರ್ ಜಿಲ್ಲೆಗಳ ಜಿಲ್ಲಾ ಮೀಸಲು ಗಾರ್ಡ್‌ಗೆ ಸೇರಿದ ಸಿಬ್ಬಂದಿ, ಬಸ್ತಾರ್ ಫೈಟರ್ಸ್ ಮತ್ತು ವಿಶೇಷ ಕಾರ್ಯಪಡೆ, ರಾಜ್ಯ ಪೊಲೀಸ್‌ನ ಎಲ್ಲಾ ಘಟಕಗಳು, ಮಾವೋವಾದಿಗಳ ಇಂದ್ರಾವತಿ ಪ್ರದೇಶ ಸಮಿತಿಯ ಕೇಡರ್‌ಗಳು ನೀಡಿದ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು.

ಈ ಕಾರ್ಯಾಚರಣೆ ಮುಂದುವರಿದಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯೊಂದಿಗೆ ಛತ್ತೀಸ್​ಗಢದಲ್ಲಿ ಭದ್ರತಾ ಪಡೆಗಳೊಂದಿಗಿನ ಎನ್‌ಕೌಂಟರ್‌ಗಳಲ್ಲಿ ಈ ವರ್ಷ ಇದುವರೆಗೆ 107 ನಕ್ಸಲೀಯರು ಹತರಾಗಿದ್ದಾರೆ.

RELATED ARTICLES
- Advertisment -
Google search engine

Most Popular