Friday, April 11, 2025
Google search engine

Homeರಾಜ್ಯಸುದ್ದಿಜಾಲಗುರು, ಗುರಿ ಇದ್ದರೆ ಯಶಸ್ಸು: ವನಮಾಲ ಸಿ ಕೆ

ಗುರು, ಗುರಿ ಇದ್ದರೆ ಯಶಸ್ಸು: ವನಮಾಲ ಸಿ ಕೆ

ಮೈಸೂರು: ‘ಗುರು ಮತ್ತು ಗುರಿ ಇದ್ದರೆ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ’ ಎಂದು N I E ಕಾಲೇಜು ಪ್ರೊಫೆಸರ್ ಡಾ.ವನಮಾಲ ಸಿ.ಕೆ ಹೇಳಿದರು.

ನಗರದ ಎಂ ಜಿ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಶ್ರೀ ದುರ್ಗಾ ಫೌಂಡೇಶನ್ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಕರ ಅಭಿನಂದನಾ ಸಮಾರಂಭದಲ್ಲಿ ಡಾ. ವನಮಾಲ ಸಿ ಕೆ, ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು ಶಿಕ್ಷಕರು ವಿದ್ಯಾರ್ಥಿಗಳ ಬದುಕನ್ನು ರೂಪಿಸುವ ನೇತಾರರು. ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿ, ನೈತಿಕ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಪಾತ್ರ ಅನನ್ಯ ಎಂದರು.

ನಂತರ ಮಾತನಾಡಿದ ಸಮಾಜ ಸೇವಕರಾದ ಶಾಂತಮ್ಮ ಶಿಕ್ಷಕರದ್ದು ಒಂದು ಪವಿತ್ರ ವೃತ್ತಿ. ಇದರಲ್ಲಿ ಸಿಗುವ ಆತ್ಮಶಾಂತಿ ಬೇರೆಲ್ಲಿಯೂ ಸಿಗಲು ಸಾಧ್ಯವಿಲ್ಲ. ಶಿಕ್ಷಕ ವೃತ್ತಿಯನ್ನು ಕೇವಲ ನೌಕರಿ ಎಂದು ಭಾವಿಸದೇ ಸೇವಾ ಮನೋಭಾವದಿಂದ ಕೆಲಸ ಮಾಡಬೇಕು ಎಂದರು.

ಇದೇ ಸಂದರ್ಭದಲ್ಲಿ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್, ಮೈಸೂರು ನಗರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ರೇಣುಕಾ ರಾಜ್, ಸಮಾಜಸೇವಕರಾದ ಶಾಂತಮ್ಮ, ರೂಪದರ್ಶಿ ರೇಣುಕಾ, ಶೋಭಾ, ಅಶ್ವಿನಿ ಗೌಡ, ದಿ ಗ್ರಾಜುಯೇಟ್ಸ್ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕರಾದ ವರಲಕ್ಷ್ಮಿ ಅಜಯ್, ರಂಜಿತ, ವಿಶ್ವ ಹಿಂದೂ ಪರಿಷತ್ ವಿಭಾಗ ಸಂಯೋಜಕಿ ಸವಿತಾ ಘಾಟ್ಕೆ, ಹಾಗೂ ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular