ಮಂಗಳೂರು : ಬ್ರಹ್ಮಶ್ರೀ ನಾರಾಯಣ ಗುರುಗಳ 169 ನೇ ಜಯಂತಿ ಪ್ರಯುಕ್ತ ಗುರುಪೂಜೆಯನ್ನು ಮಂಗಳೂರು ನಗರದ ಮಂಗಳಾದೇವಿ ಬಿಲ್ಲದ ಸಂಘದ ವತಿಯಿಂದ ಸೆಪ್ಟೆಂಬರ್ 1ರಂದು ಮಂಗಳಾದೇವಿ ದೇವಸ್ಥಾನದ ಪ್ರಾಂಗಣದಲ್ಲಿ ನಡೆಸಲು ನಿರ್ಧರಿಸಿದ್ದೇವೆ ಎಂದು ಅಧ್ಯಕ್ಷ ಎಂ.ಕೃಷ್ಣಪ್ಪ ಪೂಜಾರಿ ತಿಳಿಸಿದ್ದಾರೆ. ಅವರು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು. ಈ ಕಾರ್ಯಕ್ರಮವು ಸಂಜೆ 5.30 ಕ್ಕೆ ಶ್ರೀ ಜನಾರ್ಧನ ಪೂಜಾರಿ ಮತ್ತು ಬಳಗದವರು ಬೆಳಾಲು ಬೆಳ್ತಂಗಡಿ ತಾಲೂಕು ಇವರ ಭಜನೆಯೊಂದಿಗೆ ಪ್ರಾರಂಭಗೊಂಡು ಸಭಾ ಕಾರ್ಯಕ್ರಮ ಮತ್ತು ಮಹಾಪೂಜೆಯೊಂದಿಗೆ ಸಂಪನ್ನಗೊಳ್ಳಲಿದೆ ಅಂದ್ರು.
ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದ ಬೋಜರಾಜ್ ವಾಮಂಜೂರು ಇವರಿಗೆ ಕಲಾ ಕ್ಷೇತ್ರದಲ್ಲಿ, ಪ್ರದೀಪ್ ಕುಮಾರ್ ನಿವೃತ್ತ ಯೋಧರು, ಸದಾನಂದ ಪೂಜಾರಿ ವೈದ್ಯಕೀಯ ಕ್ಷೇತ್ರ, ಖ್ಯಾತ ನರರೋಗ ತಜ್ಞರು ಜಿಲ್ಲಾ ವೆನ್ಹಾಕ್ ಸರ್ಕಾರಿ ಆಸ್ಪತ್ರೆ, ಪ್ರೇಮನಾಥ್ ಸುವರ್ಣ ಯೋಗ ಗುರು ಹಾಗೂ ಕುಸ್ತಿಪಟು ಕ್ರೀಡಾ ಕ್ಷೇತ್ರ ಇವರುಗಳಿಗೆ ಸನ್ಮಾನ ಮಾಡಲಾಗುವುದು ಅಂದರು.