ಮೋದಿಯಂತಹ ನಾಯಕ ಇರುವುದು ಸೌಭಾಗ್ಯ
ಮಂಡ್ಯ:ಹತ್ತು ವರ್ಷಗಳಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶವನ್ನು ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗುತ್ತಿದೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳನ್ನು ನಂಬಿ ಮತ ಹಾಕಬೇಡಿ. ಮೋದಿಯಂತಹ ನಾಯಕ ನಮಗೆ ದೊರೆತಿರುವುದು ನಮ್ಮೆಲ್ಲರ ಸೌಭಾಗ್ಯ’ ಎಂದು ವೀರಶೈವ ಮುಖಂಡ ಗುರುಪಾದ ಸ್ವಾಮಿ ತಿಳಿಸಿದರು.
ಬುದುವಾರ ಮಂಡ್ಯದ ನೆಹರು ನಗರದಲ್ಲಿ ಮೈತ್ರಿ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪರ ಅಂಗಡಿ ಮುಂಗಟುಗಳಿಗೆ ತಿರಲಿ ಬಿರುಸಿನ ಪ್ರಚಾರ ಮಾಡಿದರು ಬಳಿಕ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ನೀಡಿರುವು ಗ್ಯಾರಂಟಿಗಳಿಂದ ದೇಶ ಅಭಿವೃದ್ಧಿಯಾಗುತ್ತಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷ ಹೇಳುತ್ತಿರುವ ಗ್ಯಾರಂಟಿಗಳಿಗೆ ಗಮನ ನೀಡದೆ ಮೋದಿಯವರನ್ನು ಮೂರನೇ ಬಾರಿಗೆ ಪ್ರಧಾನಿ ನಾಗಿಸಲು ಮಂಡ್ಯ ಲೋಕಸಭಾ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಮತ ನೀಡಿ ಎಂದು ಮನವಿ ಮಾಡಿದರು.
ರಾಜು ಕ್ಷತ್ರಿಯ ಸಮಾಜದ ಎನ್.ಎಸ್ ರಾಜೇಂದ್ರ , ಒಕ್ಕಲಿಗ ಯುವ ಮುಖಂಡ ವೈ.ಜೆ ನವೀನ್ ಕುಮಾರ್, ಮೈಸೂರು ಕುರುಬ ಸಮಾಜದ ಮುಖಂಡರಾದ ರಂಗನಾಥ್, ವರುಣಾ ಕ್ಷೇತ್ರದ ವೀರಶೈವ ಮುಖಂಡ ಕೋಣನೂರುಪುರ ಪ್ರಭುಸ್ವಾಮಿ, ಹಾಗೂ ಇನ್ನಿತರರು ಪ್ರಚಾರದಲ್ಲಿ ಭಾಗಿಯಾಗಿದ್ದರು.