ವರದಿ:ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಹೊಸೂರು ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಹಳಿಯೂರು ಎಚ್.ಬಿ.ನವೀನ್ ಕುಮಾರ್ ಅವಿರೋಧವಾಗಿ ಆಯ್ಕೆಯಾದರು.
ಗುರುವಾರ ಸಂಘದ ಕಚೇರಿಯಲ್ಲಿ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಚ್.ಬಿ.ನವೀನ್ ಕುಮಾರ್ ಅವರನ್ನ ಹೊರತು ಪಡಿಸಿ ಬೇರೆಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿದ್ದ ಸಂಘದ ಸಿಇಓ ಚಂದ್ರಕಲಾ ಪಾಪೇಗೌಡ ಇವರ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.
ಹಾಲಿ ಅಧ್ಯಕ್ಷರಾಗಿದ್ದ ಎಚ್.ಎಸ್.ಜಗದೀಶ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಈ ಚುನಾವಣೆ ನಡೆಯಿತು.
ಅಧ್ಯಕ್ಷರಾಗಿ ನವೀನ್ ಕುಮಾರ್ ಮಾತನಾಡಿ, ಸಂಘದಲ್ಲಿ ಹೊಸದಾಗಿ ಸದಸ್ಯರಾಗಿರುವ ಷೇರುದಾರಿಗೆ ಸಾಲ ಕೊಡಿಸುವುದು, ಸಂಘದ ಕಟ್ಟಡದ ಅಭಿವೃದ್ದಿಗೆ ಕ್ರಮ, ಜತಗೆ ರೈತರಿಗೆ ಜಿಲ್ಲಾ ಸಹಕಾರ ಬ್ಯಾಂಕಿನಿಂದ ಸಿಗುವ ಸವಲತ್ತುಗಳನ್ನು ಒದಗಿಸಿ ಕೊಡಲು ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಚುನಾವಣಾ ಸಭೆಯಲ್ಲಿ ಉಪಾಧ್ಯಕ್ಷ ಸಿ.ಎಂ.ರಾಜೇಗೌಡ, ನಿರ್ದೇಶಕರಾದ ಎಚ್.ಎಸ್.ಜಗದೀಶ್, ಎಸ್.ಬಿ.ಹುಚ್ಚೇಗೌಡ, ವಿವೇಕನಂದ, ಎಚ್.ಎನ್.ರಮೇಶ್,ಎಚ್.ಅರ್.ಕೃಷ್ಣಮೂರ್ತಿ, ಎಚ್.ಅರ್.ಮಹೇಶ್,ಕಮಲಮ್ಮ,ಪಾರ್ಥಯ್ಯ,ಕೆಂಪನಾಯಕ, ಸಂಘದ ಜಿಲ್ಲಾ ಮೇಲ್ವಿಚಾರಕ ಮೂಡಲಕೊಪ್ಪಲು ದಿನೇಶ್ ಇದ್ದರು.
ನಂತರ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಹೊಸೂರು.ಎ.ಕುಚೇಲ್, ಸಾಲಿಗ್ರಾಮ ಜೆಡಿಎಸ್ ಅಧ್ಯಕ್ಷ ಮೆಡಿಕಲ್ ರಾಜಣ್ಣ , ಪ್ರಧಾನ ಕಾರ್ಯದರ್ಶಿ ಬೆಣಗನಹಳ್ಳಿಪ್ರಶನ್ನ, ಆಶ್ರಯ ಸಮಿತಿ ಮಾಜಿ ಸದಸ್ಯ ಬಿ.ರಮೇಶ್, ಸಿದ್ದಾಪುರ ಗ್ರಾ.ಪಂ.ಸದಸ್ಯ ಅಭಿಲಾಷ್, ಕೃಷಿಕ ಸಮಾಜದ ನಿರ್ದೇಶಕ ಎಚ್.ಕೆ.ಕೀರ್ತಿ, ದೊಡ್ಡಕೊಪ್ಪಲು ನವೀನ್, ವಕೀಲರಾದ ಉದಯ್, ಮನೋಹರ್, ನಿವೃತ್ತ ಶಿಕ್ಷಕ
ಸನತ್ ಕುಮಾರ್, ವೆಂಕಟೇಗೌಡ, ಗಿರೀಶ್, ಗ್ರಾ.ಪಂ.ಸದಸ್ಯ ಕೃಷ್ಣಮೂರ್ತಿ, ಮಲ್ಲೇಶಚಾರಿ,
ಚಂದ್ರೇಗೌಡ, ಡೈರಿ ಅಧ್ಯಕ್ಷ ಹರೀಶ್, ಎಚ್.ಜೆ. ಕುಮಾರ್, ರೇವಣ್ಣ, ಗೌಡೇನಹಳ್ಳಿ ಪವನ್, ಬೆಣಗನಹಳ್ಳಿ ಸೋಮಶೇಖರ್, ಮಹಾಲಿಂಗಣ್ಣ ಉಪನ್ಯಾಸಕ ಪಾಂಡು ಇದ್ದರು ಇನ್ನಿತರರು ನೂತನ ಅಧ್ಯಕ್ಷ ನವೀನ್ ಕುಮಾರ್ ಅವರನ್ನು ಅಭಿನಂಧಿಸಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.



