Monday, April 21, 2025
Google search engine

Homeರಾಜ್ಯಸುದ್ದಿಜಾಲಎಚ್.ಡಿ. ಕೋಟೆ ಮತ್ತು ಸರಗೂರು ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಕಾರ್ಯಕ್ರಮ

ಎಚ್.ಡಿ. ಕೋಟೆ ಮತ್ತು ಸರಗೂರು ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಕಾರ್ಯಕ್ರಮ

ಎಚ್.ಡಿ. ಕೋಟೆ : ತಾಲ್ಲೂಕು ಪತ್ರಕರ್ತರ ಸಂಘವು ಜಿಲ್ಲೆಗೆ ಮಾದರಿಯಾಗುವ ನಿಟ್ಟಿನಲ್ಲಿ ಸಮಾಜ ಸೇವಾ ಕಾರ್ಯಗಳನ್ನು ಮಾಡಲಾಗಿದೆ ಎಂದು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರವಿಕುಮಾರ್ ತಿಳಿಸಿದರು.

ಪಟ್ಟಣದ ಹ್ಯಾಂಡ್‌ಪೋಸ್ಟ್ ನಲ್ಕಿರುವ ಮೈರಾಡ ಕಚೇರಿಯಲ್ಲಿ ನಡೆದ ನೂತನ ಪದಗ್ರಹಣ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಹಿಂದಿನ ಬಾರಿಯ ಪದಾಧಿಕಾರಿಗಳು ಮಾಡಿದ ಸಾಮಾಜಿಕ ಕಾರ್ಯಗಳು, ಈ ಬಾರಿಯ ಪದಾಧಿಕಾರಿಗಳಿಂದಲೂ ಸಹ ಮುಂದುವರಿಯಬೇಕು. ಈ ಬಾರಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಚುನಾವಣೆಯಲ್ಲಿ ಸಂವಿಧಾನಬದ್ಧವಾಗಿ ಆಯ್ಕೆಯಾಗಿದ್ದಾರೆ ಎಂದರು. ಸಂಘವು ನಿಂತ ನೀರಾಗದೇ ಹರಿಯುವ ನೀರಾಗಿ, ಅನುದಿನ ಹೊಸತನವನ್ನು ಕಾಣುತ್ತಾ ಹೋಗಬೇಕು ಎಂದು ತಿಳಿಸಿದರು.

ಮೈಸೂರು ಜಿಲ್ಲಾ ಗ್ರಾಮಾಂತರ ಉಪಾಧ್ಯಕ್ಷ ಧರ್ಮಾಪುರ ನಾರಾಯಣ್ ಮಾತನಾಡಿ ದೃಶ್ಯ ಮಾಧ್ಯಮದ ಜೊತೆ ಇಂದು ಮುದ್ರಣ ಮಾಧ್ಯಮದ ಭಾರಿ ಪೈಪೋಟಿ ನೀಡುವುದರ ಜೊತೆಗೆ ತನ್ನತನವನ್ನು ಉಳಿಸಿಕೊಂಡು ಮುದ್ರಣ ಮಾಧ್ಯಮ ಸಾಗುತ್ತಿದೆ ಎಂದು ತಿಳಿಸಿದರು. ಸ್ಥಳೀಯ ವರದಿಗಾರರ ವೃತ್ತಿ ಬದ್ಧತೆಯಿಂದಾಗಿ ಇಂದು ದೃಶ್ಯ ಮಾಧ್ಯಮಕ್ಕೆ ಸಡ್ಡು ಹೊಡೆದು ಮುದ್ರಣ ಮಾಧ್ಯಮ ನಿಲ್ಲುವಂತಾಗಿದೆ ಎಂದರು. ನೂತನ ಅಧ್ಯಕ್ಷ ಬೀಚನಹಳ್ಳಿ ಮಂಜು ಮಾತನಾಡಿ ತಾಲ್ಕೂಕಿನಲ್ಲಿ ಸಂಘವು ಮಾದರಿ ಸಂಘವಾಗಿ ಗುರುತಿಸಿಕೊಂಡಿದೆ. ಅದೇ ರೀತಿ ಮುಂದಿನ ದಿನಗಳಲ್ಲಿ ಮಾದರಿ ಸಂಘವಾಗಿ ಮುಂದುವರಿಸಿಕೊಂಡು ಹೋಗುವುದಾಗಿ ತಿಳಿಸಿದ ಅವರು ಆರ್ಥಿಕವಾಗಿಯೂ ಸಹ ಅಭಿವೃದ್ಧಿ ಮಾಡಲು ಯತ್ನಿಸುವುದಾಗಿ ಭರವಸೆ ನೀಡಿದರು.

ಪದಗ್ರಹಣ : ಅಧ್ಯಕ್ಷರಾಗಿ ಬೀಚನಹಳ್ಳಿ ಮಂಜುನಾಥ್, ಉಪಾಧ್ಯಕ್ಷರಾಗಿ ಎಡತೊರೆ ಮಹೇಶ್, ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಆರ್. ನಾಗರಾಂ, ಕಾರ್ಯದರ್ಶಿಯಾಗಿ ಎಚ್.ಪಿ. ದೊಡ್ಡಸಿದ್ದಯ್ಯ, ಖಜಾಂಚಿಯಾಗಿ ಮಂಜು ಕೋಟೆ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಜಿ. ರವಿಕುಮಾರ್, ಬಿ. ನಾಗೇಶ್, ತುಂಬುಸೋಗೆ ರೇಣುಕಾ, ಜಶೀಲಾ, ಬಿ. ರಂಗರಾಜು, ರವಿಕುಮಾರ್, ಸಿ. ಪುಟ್ಟರಾಜು ಪದಗ್ರಹಣ ಸ್ವೀಕರಿಸಿದರು.

ಮೈಸೂರು ಜಿಲ್ಲಾ ಗ್ರಾಮಾಂತರ ಕಾರ್ಯದರ್ಶಿ ಮಹದೇವು, ನಿರ್ದೇಶಕ ದ.ರಾ. ಮಹೇಶ್, ಕನ್ನಡ ಪ್ರಮೋದ್, ಬಸವರಾಜು, ರೇಣುಕ, ರವಿಕುಮಾರ್, ಮಂಜುಕೋಟೆ, ನಿಕಟಪೂರ್ವ ಅಧ್ಯಕ್ಷ ಸತೀಶ್ ಆರಾಧ್ಯ, ನಾಗಾರಾಂ, ಮಂಜುಕೋಟೆ, ವಾಸುಕಿನಾಗೇಶ್, ದಾಸೇಗೌಡ, ರಂಗರಾಜು, ಶ್ರಿನಿಧಿ, ಪುಟ್ಟರಾಜು, ಚಿಕ್ಕಣ್ಣ, ಸುರೇಶ್, ದೊಡ್ಡಸಿದ್ದು, ಯಡತೊರೆ ಮಹೇಶ್, ಜಶೀಲಾ, ನಾಗೇಶ್, ಆನಂದ್, ಚಂದ್ರು ಇದ್ದರು.

RELATED ARTICLES
- Advertisment -
Google search engine

Most Popular